ವರದಿ : ಮಹೇಶ್
ಬೈಂದೂರು : ಕಳೆದ ಹಲವು ದಿನಗಳಿಂದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಕರಾವಳಿ ಗಡಿ ಭಾಗವಾದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ ಬಳಿ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿ ಚೆಕ್ ಪೋಸ್ಟ್ ಮೂಲಕ ಅಲ್ಲದೆ ಅಕ್ರಮವಾಗಿ ಕಳ್ಳ ದಾರಿಯಲ್ಲಿ ತಿರುಗಾಟ ನಡೆಸುತ್ತಿರುವುದು ಕಂಡು ಬಂದಿತ್ತು. ಈ ಸುದ್ದಿಯನ್ನು ತಿಳಿದ ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮಿ ಕಳ್ಳ ರಸ್ತೆಯ ಮಧ್ಯೆ ಡ್ರಜ್ಜಿಂಗ್ ಹೊಂಡ ತೆಗೆಸುವುದರ ಮೂಲಕ ಅಕ್ರಮವಾಗಿ ತಿರುಗಾಟ ನಡೆಸುವ ವಾಹನಕ್ಕೆ ಕಡಿವಾಣ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಐ.ಆರ್.ಬಿ ಸಿಬ್ಬಂದಿ ದೀಪಕ್ ಶೆಟ್ಟಿ ಶಿರೂರು ಮತ್ತಿತರರು ಉಪಸ್ಥಿತರಿದ್ದರು.
Advertisement. Scroll to continue reading.