ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕಾನೂನಿನ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ. ಸರ್ಕಾರವಾಗಲಿ, ಶಾಸಕರಾಗಲಿ, ಸಂಸದರಾಗಲಿ ಯಾರೂ ಹಲ್ಲೆ, ಕೊಲೆ ಕಾನೂನಿನ ಸಮಸ್ಯೆಯಲ್ಲಿ ಮಧ್ಯ ಪ್ರವೇಶ ಮಾಡಿಲ್ಲ. ಮಾಡುವುದೂ ಇಲ್ಲ. ಕಾನೂನು ತನ್ನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಾಜಿ ಶಾಸಕ ಯಡಮೊಗೆ ಕೊಲೆ ಪ್ರಕರಣದಲ್ಲಿ ಹಾಲಿ ಶಾಸಕರ ಕೈವಾಡವಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಸುಕುಮಾರ್ ಶೆಟ್ಟಿ, ಬೇಗ ಮತ್ತೆ ಎಲೆಕ್ಷನ್ ನಡೆಯಬೇಕು ಎಂಬ ಉದ್ದೇಶದಿಂದ ಅವರು ಹೇಳಿದ್ದಾರೆ. ಕೊಲೆ ಪ್ರಕರಣದ ವಿಚಾರವಾಗಿ ಪ್ರಮಾಣಿಕ, ನಿಷ್ಪಕ್ಷವಾದ ತನಿಖೆಗಳಾಗಬೇಕು. ಅಪರಾಧಿಗಳನ್ನು ಬಂಧಿಸಬೇಕು. ಬಿಜೆಪಿಯವರು ಇದ್ದರೂ, ಯಾರೇ ಶಾಮೀಲಾಗಿದ್ದರೂ ಅವರನ್ನು ಹಿಡಿದು ಬಂಧಿಸುವ ಕೆಲಸವಾಗಬೇಕು ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement. Scroll to continue reading.

In this article:B.M.Sukumar Shetty, Diksoochi news, diksoochi Tv, diksoochi udupi, kota shrinivas Poojary
Click to comment

































