ಕಾಪು: ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ಅಲ್ಪ ಅಸಂಖ್ಯಾತ ಘಟಕದ ರಾಜ್ಯಾಧ್ಯಕ್ಷರಾದ ವೈ ಸೈಯದ್ ಅಹ್ಮದ್ ಅವರ ಆದೇಶದ ಮೇರೆಗೆ ಮತ್ತು ಮಾಜಿ ಸಚಿವ ರಾದ ವಿನಯ ಕುಮಾರ ಸೊರಕೆಯವರ ಮಾರ್ಗದರ್ಶನ ಯಂತೆ ರಾಜ್ಯ ಅಲ್ಪ ಅಸಂಖ್ಯಾತ ಘಟಕ ಹಾಗು ಕಾಪು ಕಾಂಗ್ರೆಸ್ ಅಲ್ಪ ಅಸಂಖ್ಯಾತ ಘಟಕದ ಜಂಟಿ ಸಹಯೋಗದಲ್ಲಿ ಮಲ್ಲಾರಿನ ನಿರಾಶ್ರಿತರ ವೃದ್ಧಾಶ್ರಮಕ್ಕೆ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಪು ಕಾಂಗ್ರೆಸ್ ಅಲ್ಪ ಅಸಂಖ್ಯಾತ ಘಟಕದ ಅಧ್ಯಕ್ಷ ರಾದ ಶರ್ಪುದೀನ್ ಶೇಖ್ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ನಿರಂತರ ಜನರ ಸೇವೆಯಲ್ಲಿ ತೊಡಗಿದೆ ಎಂದರು. ರಾಜ್ಯ ಅಲ್ಪ ಅಸಂಖ್ಯಾತ ಘಟಕದ ಸಂಯೋಜಕರಾದ ಫಾರುಕ್ ಚಂದ್ರನಗರ ಮಾತನಾಡಿ, ಕಾಪು ಸಮಾಜ ಸೇವೆ ವತಿಯಿಂದ 300 ಹೆಚ್ಚು ಅಶಕ್ತರ ಕುಟುಂಬಕ್ಕೆ ಪಡಿತರ ಕಿಟ್ ವಿತರಣೆ ಮಾಡಿದ್ದೇವೆ. ಇನ್ನೂ ಮುಂದೆಯೂ ಸಹ ದಾನಿಗಳ ಸಹಯೋಗ ದೊಂದಿಗೆ ಮುಂದುವರೆಸುತೇವೆ ಎಂದರು.
ಈ ಸಂದರ್ಭದಲ್ಲಿ ಕಾಪು ನಗರ ಕಾಂಗ್ರೆಸ್ ಅಧ್ಯಕ್ಷ ರಾದ ಸಾದಿಕ್ ದಿನಾರ್, ಮಜೂರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ನಾಗಭೂಷಣ ರಾವ್, ಮಜೂರು ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯ ದೀರಜ್, ಶಿರ್ವ ಗ್ರಾಮ ಪಂಚಾಯಿತಿ ಸದಸ್ಯರಾದ ಜಸೀಂತ ಡಿಸೋಜ, ಕಾಂಗ್ರೆಸ್ ಮುಖಂಡರಾದ ಲ್ಯಾಂಸಿ ಕೋರ್ಡ, ಅಬ್ದುಲ್ ಇಲಿಯಾಸ್ ಹಾಗೂ ಪ್ರವೀಣ್ ಉಪಸ್ಥಿತರಿದ್ದರು.



































