ಕಾಪು: ತಾಲೂಕಿನಾದ್ಯಂತ ಭಾನುವಾರ ಹಾಗೂ ಸೋಮವಾರ ಸುರಿದ ಭಾರೀ ಮಳೆಗೆ 2 ಲಕ್ಷ 56 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ.

ಹೆಜಮಾಡಿ ಗ್ರಾಮದ ನಿವಾಸಿಗಳಾದ ಜಲೀಲ್ ಎಂಬವರ ಮನೆಗೆ ಮರ ಬಿದ್ದು 25 ಸಾವಿರ ನಷ್ಟ, ಫಾರೂಕ್ ಎಂಬವರ ಮನೆಗೆ ಮರ ಬಿದ್ದು ಹತ್ತು ಸಾವಿರ ನಷ್ಟವಾಗಿದೆ. ಬೆಳ್ಳೆ ಗ್ರಾಮದ ದೀಪಾ ಎಂಬವರ ಮನೆಗೆ ಮರ ಬಿದ್ದು ಮನೆ ಧರಾಶಾಯಿ ಆಗಿದ್ದು, ಸುಮಾರು ಎರಡು ಲಕ್ಷ ನಷ್ಟ, ಮೂಡಬೆಟ್ಟು ಗ್ರಾಮದ ಸುಗುಣಾ ಅವರ ದನದ ಹಟ್ಟಿ ಮತ್ತು ಶೌಚಾಲಯದ ಮೇಲೆ ಮರ ಬಿದ್ದು 15 ಸಾವಿರ ನಷ್ಟ ಮತ್ತು ಎಲ್ಲೂರು ಗ್ರಾಮದ ಗೋಪಾಲಕೃಷ್ಣ ಅವರ ಅಡಿಕೆ ತೋಟಕ್ಕೆ, ಅಡಿಕೆ ಮರಗಳಿಗೆ ಹಾನಿಯುಂಟಾಗಿದ್ದು ಸುಮಾರು ಆರು ಸಾವಿರ ರೂಪಾಯಿ ನಷ್ಟ ಸಂಭವಿಸಿದೆ. ಒಟ್ಟು ಕಾಪು ತಾಲೂಕಿನಲ್ಲಿ 2 ಲಕ್ಷ 56 ಸಾವಿರ ನಷ್ಟ ಸಂಭವಿಸಿರುವುದಾಗಿ ತಹಶೀಲ್ದಾರ್ ಪ್ರತಿಭಾ ತಿಳಿಸಿದ್ದಾರೆ.
Advertisement. Scroll to continue reading.



































