ಮಂಗಳೂರು : ಲಾಕ್ ಡೌನ್ ನಿಯಮ ಉಲ್ಲಂಘಿಸಿ ಮಂಗಳಾದೇವಿ ದೇವಾಲಯದ ಸಭಾಂಗಣದಲ್ಲಿ ಅದ್ದೂರಿ ಮದುವೆ ನಡೆದಿದೆ. ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸರಕಾರದ ಮಾರ್ಗಸೂಚಿಯಂತೆ ಮದುವೆಯನ್ನು ಮನೆಯಲ್ಲಿಯೇ ನೆರವೇರಿಸಬೇಕು. 40 ಜನರಷ್ಟೇ ಪಾಲ್ಗೊಳ್ಳಬೇಕು. ಆದರೆ, ಇಲ್ಲಿ ಯಾವುದೇ ನಿಯಮ ಪಾಲನೆಯಾಗಿಲ್ಲ. ದೇವಾಲಯದ ಹೊರಗೆ 40 ಕಾರುಗಳಿಗಿಂತಲೂ ಹೆಚ್ಚು ಕಾರುಗಳು ಇದ್ದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸ್ಥಳಿಯ ಜನಪ್ರತಿನಿಧಿಯ ಮಗಳ ಮದುವೆ ಸೇರಿದಂತೆ ಒಟ್ಟು 4 ಜೋಡಿಗಳ ಮದುವೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
Advertisement. Scroll to continue reading.

In this article:Diksoochi news, diksoochi Tv, diksoochi udupi, lockdown rules break, mangala devi
Click to comment

































