ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬ್ರಹ್ಮಾವರ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಕೊಳಲಗಿರಿ ಮಾಸ್ತ್ಯಮ್ಮ ಜ್ಞಾನ ವಿಕಾಸ ಕೇಂದ್ರದಲ್ಲಿ ಪರಿಸರ ಜಾಗೃತಿ ಅಭಿಯಾನ ನಡೆಯುತ್ತಿದ್ದು ಇಂದು ಕೊಳಲಗಿರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭ ಬ್ರಹ್ಮಾವರ ಅರಣ್ಯಾಧಿಕಾರಿ ಹರೀಶ್ ಹೆಚ್. ಪರಿಸರ ಸಂರಕ್ಷಣೆ ಯಾವ ಸಸ್ಯಗಳಲ್ಲಿ ಎಷ್ಟು ಪ್ರಮಾಣದ ಆಮ್ಲಜನಕ ದೊರೆಯುತ್ತದೆ ಎನ್ನುವುದರ ಬಗ್ಗೆ ಮಾಹಿತಿ ತಿಳಿಸಿದರು. ಶಾಲಾ ಆವರಣದಲ್ಲಿ ಹಣ್ಣು ಮತ್ತು ಔಷಧಿ ಸಸ್ಯಗಳನ್ನು ಕೇಂದ್ರದ ಸದಸ್ಯರು ನಾಟಿ ಮಾಡಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ರತ್ನಾಕರ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ಅಶ್ವಿನ್ ರೋಚ್, ಪ್ರಶಾಂತ ರಾಜೇಶ್, ಕ್ಯಾಥೊಲಿಕ್ ಚರ್ಚಿನ ಅಧ್ಯಕ್ಷ ರೋಸಿ, ವಿಪತ್ತು ನಿರ್ವಹಣಾ ಘಟಕದ ಸದಸ್ಯ ರವಿರಾಜ, ಸುಕೇಶ, ವಾಸುದೇವ್, ಗೋಪಾಲ್ ಉಪಸ್ಥಿತರಿದ್ದರು. ಸೇವಾಮೇಲ್ವಿಚಾರಕಿ ಪ್ರತಿನಿಧಿಯಾದ ಶಶಿಕಲಾ ಸ್ವಾಗತಿಸಿದರು. ಮೇಲ್ವಿಚಾರಕಿ ಬಾಬಿ ವಂದಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ನೇತ್ರಾವತಿ ನಿರೂಪಿಸಿದರು.



































