ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಮಳೆಗಾಲದ ಸಂದರ್ಭದಲ್ಲಿ ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೋವಿಡ್ ಲಸಿಕೆ ಪಡೆಯಲು ಬರುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ ‘ಬ್ರಹ್ಮಾವರ ಫೌಂಡೇಶನ್’ ವತಿಯಿಂದ 60,000 ರೂ. ವೆಚ್ಚದಲ್ಲಿ ಶಾಶ್ವತ ತಗಡು ಮಾಡನ್ನು ರಚಿಸಿ ಆರೋಗ್ಯ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಕೀಯ ಅಧಿಕಾರಿ ಡಾ.ಅಜಿತ್ ಕುಮಾರ್ ಶೆಟ್ಟಿ, ಡಾ.ಮಹಾಬಲ, ಡಾ.ಮಹೇಶ್ ಐತಾಳ್, ಶಶಿಕಲಾ ಜಿ.ಹೆಗ್ಡೆ, ಪ್ರತೀಶ್ ಹೆಗ್ಡೆ, ಡೆರಿಕ್ ಡಿಸೋಜಾ, ದೇವಕಿ ಪೂಜಾರ್ತಿ, ಸ್ಟಾನಿ ವಾಜ್, ಜೇಮ್ಸ್ ಡಿ’ಸಿಲ್ವ, ಅಶೋಕ ಸಾಲ್ಯಾನ್, ಸಂಜೀವ, ಶಿವದಾಸ, ಜಗದೀಶ್ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.
Advertisement. Scroll to continue reading.

In this article:Brahmavar foundation, Diksoochi news, diksoochi Tv, diksoochi udupi
Click to comment

































