ಉಡುಪಿ : ದೈವ ಚಾಕ್ರಿ ಮಾಡುವವರಿಗೆ ಕೋವಿಡ್ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿ ಹಾಗೂ ದೈವಾರಾಧನೆಗೆ ಅವಕಾಶ ನೀಡುವಂತೆ ಕೋರಿ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ (ರಿ ) ಉಡುಪಿ ಜಿಲ್ಲೆಯ ವತಿಯಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ಸರ್ಕಾರದ ಮೂರು ಬಾರಿಯ ಕೋವಿಡ್ ಪ್ಯಾಕೇಜಿನಲ್ಲಿ ಸರ್ಕಾರ ನಮ್ಮ ಕರಾವಳಿಯ ದೈವಾರಾಧನೆ ಕ್ಷೇತ್ರದಲ್ಲಿ ದುಡಿಯುವವರಿಗೆ ಈ ಲಾಕ್ ಡೌನ್ ತುರ್ತು ಸಂದರ್ಭದಲ್ಲಿ ಯಾವುದೇ ಪರಿಹಾರ ಒದಗಿಸಿಲ್ಲ. ಎರಡು ವರ್ಷದಿಂದ ಸರಿಯಾಗಿ ಯಾವುದೇ ಪೂಜೆ, ಪುರಸ್ಕಾರ ವಾರ್ಷಿಕ ನೇಮೋತ್ಸವಗಳು ಯಾವುದೇ ಇತರ ಧಾರ್ಮಿಕ ಕಾರ್ಯಗಳು ನಡೆದಿಲ್ಲ. ಉಡುಪಿ, ಮಂಗಳೂರಿನಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ದೈವ ಚಾಕ್ರಿ ವರ್ಗದವರಿದ್ದಾರೆ. ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಜೀವನ ನಡೆಸಲು ತುಂಬಾ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಇವರಿಗೆ ಯಾವುದೇ ಸಂಪಾದನೆ ಇಲ್ಲ ದೈವಾರಾಧನೆ ಮೂಲ ಕುಲಕಸುಬಾಗಿ ಅವಲಂಬಿಸಿದ್ದಾರೆ. ಇದರಿಂದ ಬರುವ ಸಂಭಾವನೆಯಲ್ಲಿ ಕುಟುಂಬವನ್ನು ನೀಗಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಕಟ್ಟುನಿಟ್ಟಿನ ನಿಯಮಗಳೊಂದಿಗೆ 200 ಜನರ ಸೀಮಿತ ಅವಧಿಗೆ ಸರ್ಕಾರದ ದೈವಾರಾಧನೆಗೆ ಅನುಮತಿ ನೀಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ ಎಂದು ಮನವಿ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ದಿನವೇ ಮುಖ್ಯಮಂತ್ರಿಗಳಿಗೆ ನಿಮ್ಮ ಬೇಡಿಕೆಗಳ ಮನವಿಯನ್ನು ಕಳುಹಿಸಿಕೊಡುತ್ತೇನೆ. ಇದರ ಬಗ್ಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭ ಗೌರವ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ, ಅಧ್ಯಕ್ಷ ರವಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ, ಬ್ರಹ್ಮಾವರ ಘಟಕದ ಅಧ್ಯಕ್ಷ ಶ್ರೀಧರ್ ಪೂಜಾರಿ, ಉಪಾಧ್ಯಕ್ಷ ಸುಧಾಕರ್ ಮಡಿವಾಳ, ಅನೀಶ್ ಕೋಟ್ಯಾನ್, ನರಸಿಂಹ ಪರವ, ಕಾರ್ಯದರ್ಶಿ ರವೀಶ್ ಕಾಮತ್, ದಯೆಶಾ ಕೋಟ್ಯಾನ್, ರಕ್ಷಿತ್ ಕೋಟ್ಯಾನ್ ಹಾಗೂ ಗೌರವ ಹಿತೈಷಿ ನವೀನ್ ಹೆಬ್ರಿ, ಘಟಕದ ಅಧ್ಯಕ್ಷ ಸುಕುಮಾರ್ ಪೂಜಾರಿ,
ವಿಠ್ಠಲ್ ಪೂಜಾರಿ, ಸಂತೋಷ್ ಪೂಜಾರಿ, ನಂದಿ ಪೂಜಾರಿ, ರಂಗ ಪಾಣಾರ, ಸಂತೋಷ್ ಪಾಣಾರ ಮೊದಲಾದವರು ಉಪಸ್ಥಿತರಿದ್ದರು.


































