Connect with us

Hi, what are you looking for?

Diksoochi News

ಕರಾವಳಿ

ಕಲ್ಪನಾ ಮಹಲೆ ಕೊಲೆ ಪ್ರಕರಣ; ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದ ಹೈಕೋರ್ಟ್

0

ವರದಿ : ದಿನೇಶ್ ರಾಯಪ್ಪನಮಠ

ಭಟ್ಕಳ: ಸಾಗರ ರಸ್ತೆಯ ಕೋಣಾರ ಗುಡ್ಡದಲ್ಲಿ 2012 ರಲ್ಲಿ ನಡೆದಿದ್ದ ಕಲ್ಪನಾ ಮಹಲೆ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಧಾರವಾಡ ಹೈಕೋರ್ಟ್ ಎತ್ತಿ ಹಿಡಿದಿದೆ.

4 ನವೆಂಬರ್ 2012 ರಂದು ಕಲ್ಪನಾ ಮಹಲೆ ಎಂಬ ಮಹಿಳೆಯ ಕೊಲೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಮುಂಡಳ್ಳಿಯ ಸದಾಶಿವ ನಾಗಪ್ಪ ನಾಯ್ಕ ಹಾಗೂ ನಾಗರಾಜ ನಾಯ್ಕ ಎಂಬುವವರನ್ನು ಪೊಲೀಸರು ಬಂಧಿಸಿದ್ದರು.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ನ್ಯಾಯಾಧೀಶ ವಿ. ಎಸ್. ಧಾರವಾಡಕರ್ ಅರೋಪಿ ಗಳನ್ನು ದೋಷಮುಕ್ತಗೊಳಿಸಲು 26 ಮಾರ್ಚ್ 2018 ರಂದು ಆದೇಶ ಹೊರಡಿಸಿದ್ದರು.

Advertisement. Scroll to continue reading.

ಸರಕಾರ ಈ ಪ್ರಕರಣವನ್ನು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶ ಜೆ.ಎನ್. ಖಾಜೀ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ ಸರಕಾರ ಸಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಿ, ಕಾರವಾರದ ಸೆಷನ್ ನ್ಯಾಯಾಧೀಶರು ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರದ ವಕೀಲ ರವಿಕಿರಣ ಮುರ್ಡೇಶ್ವರ ಆರೋಪಿಗಳ ಪರವಾಗಿ ವಾದಿಸಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

You May Also Like

ಕರಾವಳಿ

0 ಬ್ರಹ್ಮಾವರ : ರುಡ್ ಸೆಟ್‌ ಬ್ರಹ್ಮಾವರ ಮತ್ತು ಸ್ಮಾರ್ಟ್‌ ಕ್ರೀಯೇಶನ್ಸ್‌ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು. ಆವರ್ಸೆ...

error: Content is protected !!