ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಲಸಿಕೆ ವಿತರಣಾ ಕಾರ್ಯಕ್ರಮ ಇಂದು ಬ್ರಹ್ಮಾವರ ಎಸ್ ಎಂ ಎಸ್ ಪದವಿ ಕಾಲೇಜಿನಲ್ಲಿ ಜರುಗಿತು. ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಡಾ.ಅಜಿತ್ ಕುಮಾರ್ ಶೆಟ್ಟಿಯವರ ತಂಡ ಇಂದು ಇಲ್ಲಿ ೨೦೦ ಮಂದಿಗೆ ಲಸಿಕೆ ನೀಡಿದರು.

762 ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದು ಎಲ್ಲರಿಗೂ ಲಸಿಕೆ ನೀಡುವಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಫಾಧರ್ ಎಂ.ಸಿ.ಮಥಾಯಿ, ಅನಿಲ್ ರಾಡ್ರಿಗಸ್ , ಕಾಲೇಜಿನ ಪ್ರಿನ್ಸಿಪಾಲ್ ಟಿ.ಗಣಪತಿ ಭಟ್, ಉಪ ಪ್ರಾಂಶುಪಾಲೆ ವಿದ್ಯಾಲತಾ, ಕಾಲೇಜು ಆಡಳಿತ ಮಂಡಳಿಯ ಸಿರಿಲ್ ಪಿ.ಡಿ.ಸೋಜ, ಶ್ಯಾಂ ಸನ್ ಡಿ.ಸೋಜ ಇನ್ನಿತರರು ಹಾಜರಿದ್ದರು.

Advertisement. Scroll to continue reading.

In this article:Diksoochi news, diksoochi Tv, diksoochi udupi, SMS college Brahmavar
Click to comment

































