ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಲಯನ್ಸ್ ಜಿಲ್ಲೆ 317ಸಿ 2020-21ನೇ ಸಾಲಿನಲ್ಲಿ ಹೆಬ್ರಿ ಅಮೃತ ಭಾರತಿ ಶಿಕ್ಷಣ ಸಂಸ್ಥೆಗೆ ಲಯನ್ಸ್ ಜಿಲ್ಲಾ ಗವರ್ನರ್ ನೀಲಕಂಠ ಎನ್. ಹೆಗ್ಡೆ ಅವರ ವಿಶೇಷ ಮುತುವರ್ಜಿಯಲ್ಲಿ 6 ಲಕ್ಷ ಅನುದಾನ ಮಂಜೂರಾಗಿದ್ದು ರವಿವಾರದಂದು 2021-22ನೇ ಸಾಲಿನ ಜಿಲ್ಲಾ ಗವರ್ನರ್ ವಿಶ್ವನಾಥ್ ಶೆಟ್ಟಿ ಅವರ ಸಮ್ಮುಖದಲ್ಲಿ ನಿಕಟಪೂರ್ವ ಜಿಲ್ಲಾ ಗವರ್ನರ್ ನೀಲಕಂಠ ಎಂ ಹೆಗ್ಡೆ ಅವರು ಅಮೃತ ಭಾರತಿ ಸಂಸ್ಥೆಯ ಅಧ್ಯಕ್ಷ ರವಿ ರಾವ್ ಹಾಗೂ ಕಾರ್ಯದರ್ಶಿ ಗುರುದಾಸ್ ಶೆಣೈ ಅವರಿಗೆ ಡಿಸಿಜಿ ಗ್ರ್ಯಾಂಟ್ ನ ಮೊದಲ ಕಂತಿನ ಚೆಕ್ ನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಪುಟದ ಹಿರಿಯ ಸದಸ್ಯರಾದ ರಾಜು ಕೋಟ್ಯಾನ್, ಜಯಪ್ರಕಾಶ್ ಭಂಡಾರಿ, ಪ್ರಶಾಂತ್ ಭಂಡಾರಿ, ರಮೇಶ್ ಶೆಟ್ಟಿ, ಧನುಷ್, ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ಭಾರ್ಗವಿ ಐತಾಳ್, ನೂತನ ಅಧ್ಯಕ್ಷ ವಾದಿರಾಜ್ ಶೆಟ್ಟಿ ಚಾರ,ಸ್ಥಾಪಕ ಅಧ್ಯಕ್ಷ ದಿನಕರ ಪ್ರಭು, ಕೋಶಾಧಿಕಾರಿ ಡಾ.ರವಿ ಪ್ರಸಾದ್ ಹೆಗ್ಡೆ ,ಕಾರ್ಯದರ್ಶಿ ಹೆಬ್ರಿ ಉದಯ ಕುಮಾರ್ ಶೆಟ್ಟಿ ,ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ನ ಪ್ರಮುಖರಾದ ಕೃಷ್ಣ ಶೆಟ್ಟಿ ,ಹರೀಶ್ ಪೂಜಾರಿ, ರಮೇಶ್ ಆಚಾರ್ಯ, ರವೀಂದ್ರನಾಥ್ ಶೆಟ್ಟಿ ,ಮಹಾಬಲ ಶೆಟ್ಟಿ , ಪ್ರಸಾದ್ , ಸುಜಾತ ಹರೀಶ್ ಮೊದಲಾದವರು ಉಪಸ್ಥಿತರಿದ್ದರು.


































