ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಕೇಂದ್ರ ಮೋದಿ ಸರ್ಕಾರ ನಿರಂತರವಾಗಿ ಪೆಟ್ರೋಲ್ ಡೀಸೆಲ್ ಗ್ಯಾಸ್ ಮತ್ತು ದಿನಬಳಕೆ ವಸ್ತುಗಳ ದರವನ್ನು ಗಗನಕ್ಕೆ ಏರಿಸಿದರ ವಿರುದ್ಧ ಹೆಬ್ರಿ ಪೇಟೆಯಲ್ಲಿ ಬುಧವಾರ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಮತ್ತು NSUI ಘಟಕದಿಂದ ಪ್ರತಿಭಟನೆ ನಡೆಯಿತು.

ಕಾಂಗ್ರೆಸ್ಸಿನ ಮಹಿಳಾ ಪ್ರಮುಖರು ಕಾರ್ಯಕರ್ತರು ಗ್ಯಾಸ್ ಸಿಲಿಂಡರ್ ಹಿಡಿದುಕೊಂಡು ಮತ್ತು ಕಾಂಗ್ರೆಸ್ ನ ಪ್ರಮುಖರು ಸೈಕಲೇರಿ ಹಾಗೂ ಅಟೋ ರಿಕ್ಷಾವನ್ನು ಹಗ್ಗ ಕಟ್ಟಿ ಎಳೆದು ವಿನೂತನವಾಗಿ ಹೆಬ್ರಿ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಪೂಜಾರಿ, ಪಕ್ಷದ ಮುಖಂಡ ನೀರೆ ಕೃಷ್ಣ ಶೆಟ್ಟಿ, ದಿನೇಶ್ ಶೆಟ್ಟಿ ಹುತ್ತುರ್ಕೆ, ಗ್ರಾಮ ಪಂಚಾಯತ್ ಸದಸ್ಯ ಎಚ್.ಬಿ. ಸುರೇಶ್ ಜನಾರ್ದನ್, ಎಚ್.ಸಂತೋಷ್ ನಾಯ್ಕ್ , ಕೃಷ್ಣ ನಾಯ್ಕ್ , ಕರುಣಾಕರ್ ಸೇರಿಗಾರ್ ಹಾಗೂ ಕಾರ್ಕಳದ ಕಾಂಗ್ರೆಸ್ ಪಕ್ಷದ ಪ್ರಮುಖರು , ಮಹಿಳಾ ಕಾರ್ಯಕರ್ತರು, ಎನ್. ಎಸ್. ಯು.ಐ ಸದಸ್ಯರು ಮತ್ತು ಪಕ್ಷದ ಪ್ರಮುಖರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


































