ಬ್ರಹ್ಮಾವರ : ಬಾರಕೂರಿನ ಬೆಣ್ಣೆಕುದ್ರು ಮೂಲದ ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಕಲಿಯುತ್ತಿರುವ 17 ರ ಹರೆಯದ ಬಾಲಕಿ ಸ್ವೀಜಲ್ ಪುರ್ಟಾರ್ಡೋ ಇತ್ತೀಚೆಗೆ ಸ್ಟಾರ್ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ ಇವರು ಜೈಪುರದಲ್ಲಿ ಆಯೋಜಿಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಸ್ಟಾರ್ ಮಿಸ್ ಟೀನ್ ಇಂಡಿಯಾ ಸೌತ್ -2021 (Star Miss Teen India South-2021)
ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಫೈನಲ್ ಸ್ಪರ್ಧೆಯ ತೀರ್ಪುಗಾರರಾಗಿ 2016 ರ ಮಿಸ್ಟರ್ ವರ್ಲ್ಡ್ ರೋಹಿತ್ ಕಂಡೆಲ್ವಾಲ್ ಹಾಗೂ 2019 ರ ಮಿಸ್ ಇಂಡಿಯಾ, ಮಿಸ್ ವರ್ಲ್ಡ್ ಏಷ್ಯಾ ಹಾಗೂ ಮಿಸ್ ವರ್ಲ್ಡ್ ರನ್ನರ್ ಅಪ್ ಆದ ಸುಮನ್ ರಾವ್ ಆಗಮಿಸಿದ್ದರು.

ಇದಕ್ಕೂ ಮೊದಲು ಫೆಬ್ರವರಿ ತಿಂಗಳಲ್ಲಿ ನಡೆದ “ಫ್ರೆಷ್ ಫೇಸ್ ಆಫ್ ಈಗ್ನೈಟ್ ಇಂಡಿಯಾ -2021” ( ‘Fresh Face of Ignite India 2021’) ಪ್ರಶಸ್ತಿಗೂ ಕೂಡ ಸ್ವೀಜಲ್ ಭಾಜನಳಾಗಿದ್ದರು.
ಸ್ವೀಜಲ್ ಇವಳು ಉಡುಪಿ ಜಿಲ್ಲೆಯ ಬಾರಕೂರಿನ ಬೆಣ್ಣೆಕುದ್ರು ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿರುವ ಸವಿತಾ ಫುಟಾರ್ದೋ ಅವರ ಮಗಳು.

