ಹಿರಿಯಡಕ : ಕೆಪಿಎಸ್ ಹಿರಿಯಡ್ಕದ ತಾಲೂಕು ಶಾಲೆ ಹಾಗೂ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ, ಕೆಲವು ವಿದ್ಯಾರ್ಥಿಗಳ ಮನೆಗಳಿಗೆ ಡಿಡಿಪಿಐ ಭೇಟಿ ನೀಡಿದರು.
ವಿದ್ಯಾರ್ಥಿಗಳು ಶಾಲಾ ಶಿಕ್ಷಕರು ಮಾಡುತ್ತಿರುವ ಆನ್ ಲೈನ್ ತರಗತಿಯಲ್ಲಿ ಹೇಗೆ ಕಲಿಯುತ್ತಿದ್ದಾರೆ? ಚಂದನ ದೂರದರ್ಶನದಲ್ಲಿ ಪ್ರಸಾರ ಆಗುತ್ತಿರುವ ಪಾಠಗಳನ್ನು ನಿತ್ಯ ನೋಡಿ ಕಲಿಯುತ್ತಿದ್ದಾರೋ? ಎಂಬ ಇತ್ಯಾದಿ ವಿಚಾರಗಳನ್ನು ಪಾಲಕರೊಂದಿಗೆ, ಮಕ್ಕಳೊಂದಿಗೆ ಚರ್ಚಿಸಿದರು.
ಈ ಸಂದರ್ಭ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್. ನಾಗೂರು ಮಾತನಾಡಿ, ಎಲ್ಲಾ ಮಕ್ಕಳು ಟಿವಿ ಮೂಲಕ ಹಾಗೂ ಆನ್ ಲೈನ್ ತರಗತಿ ಮೂಲಕ ಉತ್ತಮವಾಗಿ ಕಲಿಯುತ್ತಿದ್ದದ್ದು ಕಂಡು ಸಂತೋಷವಾಯಿತು ಎಂದರು.
ಕೆಪಿಎಸ್ ಉಪ ಪ್ರಾಂಶುಪಾಲೆ ಶ್ರೀಮತಿ ಎ.ಶಾರದಾ, ಚಿತ್ರಕಲಾ ಶಿಕ್ಷಕ ಮೋಹನ್ ಕಡಬಾ ಉಪಸ್ಥಿತರಿದ್ದರು.
Advertisement. Scroll to continue reading.
