ಟೋಕಿಯೋ ಒಲಿಂಪಿಕ್ಸ್ 2020 : ಭಾರತಕ್ಕೆ ಮತ್ತೊಂದು ಕಂಚಿನ ಪದಕ ತಂದುಕೊಟ್ಟಿದ್ದಾರೆ ಕುಸ್ತಿಪಟು ಭಜರಂಗ್ ಪುನಿಯಾ. ಶನಿವಾರ ನಡೆದ 65 ಕೆಜಿ ಫ್ರೀಸ್ಟೈಲ್ ವಿಭಾಗದ ಪಂದ್ಯದಲ್ಲಿ ಕಜಕಿಸ್ತಾನದ ದೌಲತ್ ನಿಯಾಜ್ಬೆಕವೊ ಅವರನ್ನು 8-0 ಅಂತರದಿಂದ ಮಣಿಸಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಈ ಹಿಂದೆ ಸೆಮಿ ಫೈನಲ್ವರೆಗೂ ಭರ್ಜರಿ ಪ್ರದರ್ಶನ ನೀಡಿದ್ದ ಪುನಿಯಾ ಫೈನಲ್ ಪ್ರವೇಶಿಸುವಲ್ಲಿ ವಿಫಲರಾಗಿದ್ದರು. ಅಜರ್ಬೈಜಾನಿಯಾದ ಹಾಜಿ ಆಲಿಯಾವ್ ವಿರುದ್ಧ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ 5-12 ಅಂಕಗಳ ಅಂತರದಿಂದ ಪುನಿಯಾ ಸೋಲನುಭವಿಸಿದ್ದರು.