ಸದಾ ಕಾಲ ನೆನಪಲ್ಲಿ ಉಳಿಯುವ ಸಾಧನೆ; ಚೋಪ್ರಾರನ್ನು ಅಭಿನಂದಿಸಿದ ಪ್ರಧಾನಿ ಮೋದಿ
Published
0
ಟೋಕಿಯೋ ಒಲಂಪಿಕ್ಸ್ : ಭಾರತಕ್ಕೆ ಚಿನ್ನ ತಂದು ಕೊಟ್ಟ ನೀರಜ್ ಚೋಪ್ರಾ ಅವರ ಸಾಧನೆಗೆ ಇಡೀ ದೇಶವೇ ಅಭಿನಂದಿಸುತ್ತಿದೆ. ಪ್ರಧಾನಿ ಮೋದಿ ಅವರೂ ಟ್ವೀಟ್ ಮಾಡಿದ್ದು, ಟೊಕಿಯೋದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ನೀರಜ್ ಚೋಪ್ರಾ ಸಾಧನೆ ಸದಾ ಕಾಲ ನೆನಪಲ್ಲಿ ಉಳಿಯುವಂತಹದ್ದು ಎಂದು ಟ್ವೀಟ್ ಮಾಡಿದ್ದಾರೆ. ರಾಷ್ಟ್ರ ಪತಿ ರಮಾನಾಥ್ ಕೋವಿಂದ್ ಕೂಡಾ ನೀರಜ್ ಸಾಧನೆಗೆ ಅಭಿನಂದಿಸಿದ್ದಾರೆ.