ಬೆಂಗಳೂರು : ಆಗಸ್ಟ್ 23 ರಂದು ಶಾಲಾ- ಕಾಲೇಜುಗಳು ಆರಂಭಗೊಳ್ಳಲಿದೆ. ತಜ್ಞರ ಸಲಹೆಯ ಮೇರೆಗೆ 9 ರಿಂದ 12 ನೇ ತರಗತಿಗಳು ಆರಂಭಗೊಳ್ಳಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು. ಸುದ್ದಿಗೋಷ್ಟಿ ಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು,
ಈಗಾಗಲೇ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಯಾವುದೇ ರೀತಿಯಲ್ಲಿ ಅಡೆ ತಡೆ ಇಲ್ಲದೇ ಮಕ್ಕಳಲ್ಲಿ ಸೊಂಕು ಉಂಟಾಗಾದಂತೆ ನಡೆಸಲಾಗಿದೆ, ಯಶಸ್ವಿಯಾಗಿ ಕೂಡ ಪರೀಕ್ಷೆ ಮುಗಿದಿದೆ ಈ ಹಿನ್ನಲೆಯಲ್ಲಿ ಮಕ್ಕಳ ತಂದೆ-ತಾಯಿಯಗಳು ಶಾಲೆಗೆ ಕಳುಹಿಸುತ್ತಾರೆ ಎನ್ನುವ ನಂಬಿಕೆ ಇದೇ ಎಂದು ಅವರು ಇದೇ ವೇಳೆ ಹೇಳಿದ್ದಾರೆ.
Advertisement. Scroll to continue reading.