ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ದಿಕ್ಸೂಚಿ ನ್ಯೂಸ್ ವರದಿ ಮಾಡಿದ “ಬ್ರಹ್ಮಾವರ ಮುಚ್ಚಿದ ಶಾಲೆಗಳು ಮೂಲಭೂತ ಸೌಲಭ್ಯ ಇಲ್ಲದೆ ಪರದಾಡುವ ಮತಗಟ್ಟೆಯ ಸಿಬ್ಬಂದಿಗಳು” ಸುದ್ದಿಗೆ ಪುಲ್ ರೆಸ್ಪಾನ್ಸ್ ಬಂದಿದೆ.
ಸುದ್ದಿಯನ್ನು ಗಮನಿಸಿದ ಬ್ರಹ್ಮಾವರ ತಹಶೀಲ್ದಾರ ರಾಜಶೇಖರ ಮೂರ್ತಿ ಯವರು ಕೂಡಲೇ ವರದಿಗಾರರನ್ನು ಸಂಪರ್ಕಿಸಿ ಬ್ರಹ್ಮಾವರ ವ್ಯಾಪ್ತಿಯಲ್ಲಿರುವ ಮತಗಟ್ಟೆಯನ್ನು ಪರಿಶೀಲನೆ ಮಾಡುವ ಉತ್ಸಾಹ ತೋರಿಸಿದರು.

ಆರಂಭಿಕವಾಗಿ ಬೈಕಾಡಿ ಶಾಲೆಯನ್ನು ನೋಡುವ ಕೂತೂಹಲ ತಹಶೀಲ್ದಾರರು ವ್ಯಕ್ತಪಡಿಸಿದ ಕಾರಣ ಅಲ್ಲಿಗೆ ಭೇಟಿ ನೀಡುವುದಾಗಿ ಹೇಳಿದರು. ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ತಂಡವನ್ನು ಕೂಡಲೇ ಬರುವಂತೆ ಸೂಚಿಸಿದರು. ಕಂದಾಯ ನೀರೀಕ್ಷಕ ಲಕ್ಷ್ಮೀನಾರಾಯಣ ಭಟ್ ಹೇರೂರು ಗ್ರಾಮ ಲೆಕ್ಕಿಗ ಶಿವರಾಜ್ ಕಟ್ಟಗಿ ಅವರು ಹೇರೂರು ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಭಾಕರ ಶೆಟ್ಟಿಯ ಮತ್ತು ಗ್ರಾಮ ಸಹಾಯಕ ಶ್ರೀನಿವಾಸರೊಂದಿಗೆ 4 ಮತಗಟ್ಟೆಯಾಗಿರುವ ಮತ್ತು ಇದೀಗ ಶಾಲೆ ಮುಚ್ಚಿರುವ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದರು.

ಪರೀಶಿಲನೆ ಮಾಡಿ ಮಾದ್ಯಮದೊಂದಿಗೆ ಅವರು ಮಾತನಾಡಿ, ಸರಕಾರಿ ಅಧಿಕಾರಿಗಳ ಸಮಸ್ಯೆಯನ್ನು ಮಾಧ್ಯಮಗಳು ತೆರೆದಿಡುವಂತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮತ್ತು ಬ್ರಹ್ಮಾವರ ತಾಲೂಕಿನಲ್ಲಿ ಇಂತಹ ಮತಗಟ್ಟೆಗಳ ಮೂಲಭೂತ ಸಮಸ್ಯೆಗೆ ಸೂಕ್ತ ವ್ಯವಸ್ಥೆ ಮಾಡಲು ಕೂಡಲೆ ಜಿಲ್ಲಾಧಿಕಾರಿಗಳಿಗೆ ಚುನಾವಣಾ ಆಯೋಗಕ್ಕೆ ತಿಳಿಸಿ, ಮುಂದೆ ಬರುವ ಚುನಾವಣೆಗೆ ಸರಿಯಾದ ವ್ಯವಸ್ಥೆಯನ್ನು ಮಾಡುವುದಾಗಿ ಹೇಳಿದರು.




































