ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಶಿವಪುರ ಗ್ರಾಮದ ಯಳಗೋಳಿಯ ಉದಯಕುಮಾರ್ ಶೆಟ್ಟಿ ಅವರು ಅಂತಾರಾಷ್ಟ್ರೀಯ ಮಾನವಹಕ್ಕುಗಳ ಅಪರಾಧ ತಡೆ ವಿಭಾಗದ ಇಂಡಿಯನ್ ನ್ಯಾಷನಲ್ ಬೋರ್ಡ್ ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಇವರು ಗುಜರಾತಿನ ಖ್ಯಾತ ಉದ್ಯಮಿಯಾಗಿದ್ದು, ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ತನ್ನ ಹುಟ್ಟೂರಾದ ಶಿವಪುರ ಗ್ರಾಮದಲ್ಲಿರುವ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಉಚಿತವಾಗಿ ನೋಟ್ ಪುಸ್ತಕ ವಿದ್ಯಾರ್ಥಿವೇತನವನ್ನು ನೀಡುತ್ತಾ ಬಂದಿದ್ದಾರೆ ಮತ್ತು ಕಡು ಬಡತನದಲ್ಲಿರುವ ಸಾಕಷ್ಟು ಆರ್ಥಿಕ ಸಹಾಯ ಮಾಡಿ ಶಿವಪುರ ಪರಿಸರದಲ್ಲಿ ಹಾಗೂ ಗುಜರಾತಿನಲ್ಲಿ ಕೊಡುಗೈ ದಾನಿಯಾಗಿ ತನ್ನನ್ನು ಗುರುತಿಸಿಕೊಂಡಿದ್ದಾರೆ .
Advertisement. Scroll to continue reading.

In this article:Diksoochi news, diksoochi Tv, diksoochi udupi, shivapura, udaykumar Shetty
Click to comment

































