‘ಗಿರಿಗಿಟ್’ ಚಿತ್ರದ ಮೂಲಕ ಕೋಸ್ಟಲ್ವುಡ್ ನಲ್ಲಿ ಭಾರೀ ಮನರಂಜನಾ ರಸದೌತಣ ಉಣ ಬಡಿಸಿದ್ದ ರೂಪೇಶ್ ಶೆಟ್ಟಿ ಆ್ಯಂಡ್ ಟೀಂ ಮತ್ತೆ ಬರುತ್ತಿದೆ. ಅದೂ “ಗಮ್ಜಾಲ್” ಮೂಲಕ.
ಚಿತ್ರದ ಇಂಟ್ರೋ ಟೀಸರ್ ರಿಲೀಸ್ ಆಗಿದ್ದು, ಈ ಚಿತ್ರವೂ ಸಿನಿರಸಿಕರಿಗೆ ನಗೆಹಬ್ಬ ಆಗೋದರಲ್ಲಿ ನೋ ಡೌಟ್. ಡಿಟೆಕ್ಟಿವ್ ಅರ್ ಬೊ ಪಾತ್ರ ಪರಿಚಯವಿದಾಗಿದ್ದು, ಅರವಿಂದ್ ಬೋಳಾರ್ ಹಾಗೂ ಭೋಜರಾಜ ವಾಮಾಂಜೂರ್ ಡಿಟೆಕ್ಟಿವ್ ಗಳಾಗಿ ಕಾಮಿಡಿ ಕಚಗುಳಿ ಇಡಲಿರೋದು ಪಕ್ಕಾ ಆಗೋಗಿದೆ.

ರೂಪೇಶ್ ಶೆಟ್ಟಿ ನಟನೆಯ ಜೊತೆಗೆ ಕಥೆ, ಚಿತ್ರಕಥೆ ಬರೆದಿದ್ದು, ಪ್ರಸನ್ನ ಶೆಟ್ಟಿ ಬೈಲೂರು ಸಂಭಾಷಣೆ ಇದೆ. ನವೀನ್ ಶೆಟ್ಟಿ ಮತ್ತು ಸುಮನ್ ಸುವರ್ಣ ಚಿತ್ರವನ್ನು ನಿರ್ದೇಶಿಸಿದ್ದು, ಜಾಯೆಲ್ – ಡರೇಲ್ ಸಂಗೀತವಿದೆ. ರಾಹುಲ್ ವಸಿಷ್ಠ ಸಂಕಲನ, ನಿರಂಜನ್ ದಾಸ್ ಕ್ಯಾಮರಾ ವರ್ಕ್ ಚಿತ್ರಕ್ಕಿದೆ.
Advertisement. Scroll to continue reading.

In this article:Aravind Bolar, Bojaraja Vamanjoor, Coastalwood, Diksoochi news, Gamjaal, Roopesh shetty, Tulu Movie

Click to comment