ಕುಂದಾಪುರ: ವನಸ್ತಾ ಆಗ್ರೋ ಫುಡ್ಸ್ ರಾವವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಟೀಮ್ ಕಲತ್ವ ಹಾಗೂ ಸಿರಿ ತಂಡದ ಹೊಚ್ಚ ಹೊಸ ಕನ್ನಡ, ತುಳು ಆಲ್ಬಮ್ ಗೀತೆ ರಾಮಾಚಾರಿ ವೆಡ್ಸ್ ಮಾರ್ಗರೆಟ್ಸ್ ಬಿಡುಗಡೆಗೆ ಸಜ್ಜಾಗಿದೆ. ಜೀ ಕನ್ನಡ ವಾಹಿನಿಯ ಹೆಸರಾಂತ ರಿಯಾಲಿಟಿ ಶೋ ಆದಂತ ಡ್ರಾಮಾ ಜ್ಯೂನಿಯರ್ಸ್ ಹಾಗೂ ಡಿಕೆಡಿ ಡ್ಯಾನ್ಸ್ ಶೋ ಗಳಲ್ಲಿ ಭಾಗವಹಿಸಿ ಹೆಸರು ಗಳಿಸಿರುವ ಸೂರಜ್, ಶ್ರಾವ್ಯ ಮರವಂತೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಖ್ಯಾತ ಯೋಗಪಟು ತನ್ವಿತ ವಿ ಕುಂದಾಪುರ ಈ ಹಾಡಿಗೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವುದು ವಿಶೇಷ. ಶಿವು ಕುಂದಾಪುರ ಅವರ ನಿರ್ದೇಶನ ಹಾಗೂ ಮನೀಶ್ ಮೊಯ್ಲಿ ಅವರ ಸಹ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಹಾಡು ಏಕಕಾಲದಲ್ಲಿ ಕನ್ನಡ ಹಾಗೂ ತುಳು ಎರಡು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಕನ್ನಡ ಹಾಡಿಗೆ ಶೀತಲ್ ಎಸ್. ಎಂ ಧ್ವನಿ ನೀಡಿದರೆ, ತುಳು ಹಾಡಿಗೆ ಕೆಪಿ ಮಿಲನ್ ಹಾಗೂ ರೋಷನಿ ಪೂಜಾರಿ ಧ್ವನಿ ನೀಡಿದ್ದಾರೆ.ಹಾಗೆ ಕನ್ನಡ ಸಾಹಿತ್ಯ ಮನೀಶ್ ಮೊಯ್ಲಿ ಹಾಗೂ ತುಳು ಸಾಹಿತ್ಯ ಶ್ರೀಧರ್ ಕರ್ಕೇರ ಅವರ ಬರವಣಿಗೆಯಲ್ಲಿ ಮೂಡಿಬಂದಿದೆ. ಒಲವೇ ಖ್ಯಾತಿಯ ಸನತ್ ಉಪ್ಪುಂದರವರ ಛಾಯಾಗ್ರಹಣವಿದೆ ಹಾಗೂ ನಿತೀಶ್ ಭಾರಧ್ವಾಜ್ ರವರು ಪ್ರೊಡಕ್ಷನ್ ಮ್ಯಾನೇಜರ್ ಕಾರ್ಯವನ್ನ ನಿರ್ವಹಿಸಿದ್ದಾರೆ. ಪ್ರಚಾರ ಕಲೆಯಲ್ಲಿ ಶ್ರೀಶ ಉಪ್ಪುಂದ ಹಾಗೂ ಹಂಚಿಕೆ ವಿಭಾಗದಲ್ಲಿ ರವಿರಾಜ್ ಪೂಜಾರಿ, ಹರ್ಷಿತ್ ತೆಕ್ಕಟ್ಟೆ ಕಾರ್ಯನಿರ್ವಹಿಸಿದ್ದಾರೆ.ದುಬಾರಿ ವೆಚ್ಚದಲ್ಲಿ ಸೆಟ್ ನಿರ್ಮಿಸಿ ಚಿತ್ರೀಕರಿಸಿರುವುದು ಈ ಆಲ್ಬಮ್ ಹಾಡಿನ ವಿಶೇಷ. ಸಾಮಾಜಿಕ ಜಾಲತಾಣಗಳಲ್ಲಿ ಹೆಸರುವಾಸಿಯಾಗಿರುವ ಕುಂದಾಪುರ ಟ್ರೊಲ್ಸ್ ಸಹಾಭಾಗಿತ್ವದಲ್ಲಿ ಮೂಡಿ ಬಂದಿರುವ ಈ ಹಾಡು ಅತೀ ಆಗಸ್ಟ್ 26ಕ್ಕೆ ಟೀಮ್ ಕಲತ್ವ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ
