ಶಿರ್ವ : ಶಿರ್ವದ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಶಿರ್ವ ಸಂತ ಮೇರಿ ಹಾಗೂ ಡಾನ್ ಬಾಸ್ಕೋ ಸಮೂಹ ಸಂಸ್ಥೆಗಳ ಸಂಚಾಲಕ ವೆ.ರೆ.ಫಾ.ಡಾ.ಲೆಸ್ಲಿ ಸಿ. ಡಿಸೋಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಎನ್ಎಸ್ಎಸ್ ಧ್ಯೇಯ ನನಗಲ್ಲ ನಿನಗೆ, Not me but you ಎಂದು ಸಾರಿ ಹೇಳುವ ನಿಸ್ವಾರ್ಥ ಸೇವೆ ಎನ್ಎಸ್ಎಸ್ ವಿದ್ಯಾರ್ಥಿಗಳಿದ್ದಾಗಲೇ ಕರಗತಗೊಳಿಸಬೇಕು ಎಂಬ ಸಂದೇಶ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂತ ಮೇರಿ ಪದವಿ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಮತ್ತು ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ| ಮೆಲ್ವಿನ್ ಕ್ಯಾಸ್ಟಲಿನೋ ಮಾತನಾಡಿ, ಪಿಯುಸಿ ಎನ್ಎಸ್ಎಸ್ ವಿದ್ಯಾರ್ಥಿಗಳು ಉತ್ತಮ ಮುಖಂಡತ್ವ ಪಡೆದು ರಾಷ್ಟ್ರಸೇವೆ ಮಾಡಲು ಕೈಬೀಸಿ ಕರೆಯುತ್ತಿದೆ. ಜೀವನ ಕೌಶಲ್ಯದಂತಹ ಮೌಲ್ಯಗಳು ರೂಪುಗೊಳ್ಳಲು ಎನ್ಎಸ್ಎಸ್ ಪೂರಕ ಆಧಾರ ಸ್ತಂಭವಾಗಿದೆ ಎಂದರು.
ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಮೇಲ್ವಿನ್ ಆರಾನ್ಹ ಸದಸ್ಯರನ್ನು ಹುರಿದುಂಬಿಸಿ ತಮ್ಮ ಕಾಲೇಜು ದಿನಗಳ ಎನ್ಎಸ್ಎಸ್ ಅನುಭವಗಳನ್ನು ಹಂಚಿಕೊಂಡರು.

ಸಂಸ್ಥೆಯ ಎಂಎಸ್ಎಸ್ ಅಧಿಕಾರಿ ಮತ್ತು ರಾಜ್ಯಶಾಸ್ತ್ರ ಉಪನ್ಯಾಸಕ ಎಡ್ವರ್ಡ್ ಲಾರ್ಸನ್ ಡಿಸೋಜಾ ಎನ್ಎಸ್ಎಸ್ ಕುರಿತು ಪ್ರಾಸ್ತಾವಿಕ ಮಾತುಗಳನ್ನು ಆಡಿ ಎನ್ಎಸ್ಎಸ್ ನ ಧ್ಯೇಯ ಉದ್ದೇಶ ಹಾಗೂ ಎನ್ಎಸ್ಎಸ್ ಸಾಗಿ ಬಂದ ದಾರಿಯ ಬಗ್ಗೆ ತಿಳಿಸಿದರು.
ಎಂ ಎಸ್ ಎಸ್ ನಾಯಕ ಸಿಂಚಿತ್, ಸಹನಾಯಕಿ ವೀಕ್ಷಾ ಅವರಿಗೆ ಎನ್ಎಸ್ಎಸ್ ಕಾರ್ಯಕ್ರಮದ ಅಧಿಕಾರಿ ಪ್ರಮಾಣವಚನ ಬೋಧಿಸಿ ಎನ್ ಎಸ್ ಎಸ್ ಬ್ಯಾಡ್ಜನ್ನು ತೊಡಿಸಲಾಯಿತು. ಸದಸ್ಯರು ದೇಶ ಸೇವೆ ಮಾಡುವ ಪ್ರಮಾಣವಚನ ಸ್ವೀಕರಿಸಿದರು.
ಅದೃಷ್ಟ ಬಹುಮಾನದ ಚೀಟಿ ಸದಸ್ಯೆ ಅನನ್ಯ ಆಚಾರ್ಯ ಪಡೆದರು. ಪ್ರಾಂಶುಪಾಲ ಜಯಶಂಕರ್ ಕೆ ಸ್ವಾಗತಿಸಿದರು. ಎನ್ಎಸ್ಎಸ್ ಕಾರ್ಯಕ್ರಮದ ಅಧಿಕಾರಿ ಹಾಗೂ ಇತಿಹಾಸ ಉಪನ್ಯಾಸಕಿ ಮರಿಯಾ ಜೆಸಿಂತಾ ಫುರ್ಟಾಡೊ ವಂದಿಸಿ, ಕು. ಅಂಕಿತ ರಾವ್ ಕಾರ್ಯಕ್ರಮ ನಿರೂಪಿಸಿದರು.
