ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ರಾಜ್ಯದ ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶುಕ್ರವಾರ ಸಂಜೆ ಮಂಗಳೂರು ಉಡುಪಿ ಮಾರ್ಗವಾಗಿ ಹೆಬ್ರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಹೆಬ್ರಿಯ ರಾಮಮಂದಿರಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದರು. ರಾಮ ಮಂದಿರ ಆಡಳಿತ ಮಂಡಳಿ ವತಿಯಿಂದ ಸಚಿವರಿಗೆ ರೇಷ್ಮೆ ಶಾಲು ಹೊದಿಸಿ ಗೌರವಿಸಿದರು.
ಹೆಬ್ರಿಯ ಪಕ್ಕದ ತಾಲ್ಲೂಕು ತೀರ್ಥಹಳ್ಳಿಯ ಜನಪ್ರಿಯ ಶಾಸಕರಾದ ಸರಳ ವ್ಯಕ್ತಿತ್ವದ ಆರಗ ಜ್ಞಾನೇಂದ್ರರವರು, ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಗೃಹ ಸಚಿವರಾಗಿ ಪ್ರಥಮ ಬಾರಿಗೆ ಹೆಬ್ರಿಗೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಹಿಂದಿನ ದಿನಗಳಲ್ಲಿ ಹೆಬ್ರಿಯ ಜನರೊಂದಿಗಿನ ಒಡನಾಟ ಅಂದಿನ ದಿನಗಳ ಕೆಲವು ಘಟನೆಗಳ ಬಗ್ಗೆ ಹೆಬ್ರಿಯ ಸ್ಥಳೀಯ ಮುಖಂಡರ ಜತೆಗೆ ಸಚಿವರು ಮೆಲುಕು ಹಾಕಿದರು.

ಹೆಬ್ರಿಯ ಉದ್ಯಮಿಗಳಾದ ಯೋಗೀಶ್ ಭಟ್ ,ಸತೀಶ್ ಪೈ, ಎಚ್ .ಮೋಹನ್ ದಾಸ್ ನಾಯಕ್, ನರೇಂದ್ರ ನಾಯಕ್ , ಪಕ್ಷದ ಪ್ರಮುಖರಾದ ರಮೇಶ್ ಕುಮಾರ್ ಶಿವಪುರ, ಎಚ್ . ಕೆ ಸುಧಾಕರ್ ಹೆಬ್ರಿ, ಗ್ರಾಪಂ ಅಧ್ಯಕ್ಷೆ ಮಾಲತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು .


































