ಮಂಗಳೂರು: ವಿನಂತಿ ಹರಿಕಾಂತ “ಉತ್ರಾಸನ ಭಂಗಿ”ಯಲ್ಲಿ ದೀರ್ಘ ಕಾಲದ ವರೆಗೆ (5 ನಿಮಿಷ, 13 ಸೆಕೆಂಡ್) ತಟಸ್ಥವಾಗಿ ಹಿಡಿದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆದಿದ್ದಾಳೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮದ ನಿವಾಸಿಯಾಗಿದ್ದು ಪ್ರಸ್ತುತ 20 ವರ್ಷ ಗಳಿಂದ ಮಂಗಳೂರಿನ ಕೆ.ಎಸ್.ಆರ್.ಪಿ 7 ನೇ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈಶ್ವರ ಹರಿಕಾಂತ ಹಾಗೂ ಆರತಿ ಹರಿಕಾಂತ ದಂಪತಿಗಳ ಪುತ್ರಿ. ವಿನಂತಿ ಹರಿಕಾಂತ ತನ್ನ 5 ನೇ ವಯಸ್ಸಿನಲ್ಲಿಯೇ ಅಭೂತಪೂರ್ವ ಸಾಧನೆ ಮೆರೆದಿದ್ದಾಳೆ. ರೈಸಿಂಗ್ ಬೇಬಿ ಸ್ಟಾರ್ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದ್ದಾಳೆ.

ಯೋಗಾಸನದಲ್ಲಿ ಆಸಕ್ತಿ ಹೊಂದಿದ್ದು 100 ಕ್ಕಿಂತ ಹೆಚ್ಚಿನ ಯೋಗಾಸನ ಭಂಗಿಗಳನ್ನು ಸರಾಗವಾಗಿ ಮಾಡುವ ಇವಳು ನೃತ್ಯ, ಸಂಗೀತ, ಚಿತ್ರಕಲೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾಳೆ.
Advertisement. Scroll to continue reading.
