ಚಿಕ್ಕಮಗಳೂರು : ಕಾರು ಸಮೇತ ನೀರಿಗೆ ಹಾರಿ ಒಂದೇ ಕುಟುಂಬದವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿಯಲ್ಲಿ ನಡೆದಿದೆ.
ಭದ್ರಾವತಿ ತಾಲೂಕಿನ ಜೆ.ಡಿ.ಕಟ್ಟೆಯ ನಿವಾಸಿಗಳಾದ ಅವರು ವಾಟ್ಸಪ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಯ್ಸ್ ಮೆಸೇಜ್ ಹಾಕಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಪತಿ ಮಂಜು ಹಾಗೂ ಸುನಂದಮ್ಮ ಎಂಬುವರು ಕಾರಿನ ಸಮೇತ ನೀರುಪಾಲಾಗಿದ್ದು, ಮಂಜು ಪತ್ನಿ ಹಾಗೂ ಮಗ ಅಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ತರೀಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Advertisement. Scroll to continue reading.