ಟೋಕಿಯೋ : ಪ್ಯಾರಾ ಒಲಂಪಿಕ್ಸ್ ಪುರುಷರ ಹೈಜಂಪ್ ಟಿ47 ಫೈನಲ್ ನಲ್ಲಿ ಭಾರತದ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಪುರುಷರ ಹೈಜಂಪ್ (ಟಿ46/47) ವಿಭಾಗದಲ್ಲಿ ಭಾರತದ ನಿಶಾದ್ ಕುಮಾರ್ ಭಾನುವಾರ ಬೆಳ್ಳಿ ಪದಕ ಗೆದ್ದಿದ್ದಾರೆ. ಹೈಜಂಪ್ ಸ್ಪರ್ಧೆಯ ಫೈನಲ್ ನಲ್ಲಿ ನಿಶಾದ್ ಕುಮಾರ್ 2.06 ಮೀ ಜಿಗಿತದೊಂದಿಗೆ ತಮ್ಮದೇ ಏಷ್ಯನ್ ದಾಖಲೆಯನ್ನು ಸರಿಗಟ್ಟಿದರು. ಕಣದಲ್ಲಿದ್ದ ಇನ್ನೊಬ್ಬ ಭಾರತೀಯ ರಾಮ್ ಪಾಲ್ ಐದನೇ ಸ್ಥಾನ ಪಡೆದಿದ್ದಾರೆ
Advertisement. Scroll to continue reading.