ಉಡುಪಿ: ವಾರದ ಹಿಂದಷ್ಟೆ ನಿಶ್ಚಿತಾರ್ಥವಾಗಿದ್ದ ಯುವತಿಗೆ ಯುವಕನೋರ್ವ ಮನಬಂದಂತೆ ಚೂರಿಯಿಂದ ಇರಿದು, ಬಳಿಕ ತಾನೂ ಚೂರಿ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಆತಂಕಕಾರಿ ಘಟನೆ ರೋಬೋ ಸಾಫ್ಟ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಬಳಿ ಸೋಮವಾರ ಸಂಜೆ ನಡೆದಿದೆ.
ಅಂಬಾಗಿಲು ನಿವಾಸಿ ಸೌಮ್ಯಶ್ರೀ ಹಲ್ಲೆಗೊಳಗಾದ ಯುವತಿ. ಸ್ಕೂಟಿಯಲ್ಲಿ ಬರುತ್ತಿದ್ದ ಆಕೆಯನ್ನು ತಡೆದು ನಿಲ್ಲಿಸಿ ಯುವಕ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ. ಸೌಮ್ಯಶ್ರೀ ಕುಸಿದು ಬೀಳುತ್ತಿದ್ದಂತೆಯೇ ತಾನೂ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾನೆ.
ಸದ್ಯ ಯುವಕ-ಯುವತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement. Scroll to continue reading.