ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶಿಶು ಅಭಿವೃದ್ಧಿ ಯೋಜನೆಯ ಪೇತ್ರಿವಲಯದ ದಾಸನೊಳಲು ಅಂಗನವಾಡಿ ಕೇಂದ್ರ ದಲ್ಲಿ ಮಾತೃ ವಂದನ ಸಪ್ತಾಹ ಉದ್ಘಾಟನೆ ಕಾರ್ಯಕ್ರಮ ಜಾಥಾ ಮತ್ತು ಮಾಹಿತಿ ಕಾರ್ಯಕ್ರಮ ಹಾಗೂ ಪೋಷಣ ಅಭಿಯಾನ ಮಾಸಾಚರಣೆ ಜಾಥಾ ನಡೆಯಿತು. ಚೇರ್ಕಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಭಾಕರ್, ಯಶೋಧ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಪೂರ್ಣಿಮಾ ನೇತೃತ್ವದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಂಡಿತು.

ಈ ಕಾರ್ಯಕ್ರಮದಲ್ಲಿ ಮಾತೃವಂನ ಜಿಲ್ಲಾ ಸಂಯೋಜಕ ರಾದ ಜೀವನ್ ಮಾತೃವಂದನ ಯೋಜನೆಯ ಉದ್ದೇಶ ಮತ್ತು ಮಾಹಿತಿ ನೀಡಿದರು. ವಲಯದ ಮೇಲ್ವಿಚಾರಕಿ ವನಿತಾ ಎಸ್ ಹೆಗ್ಡೆ ಪೋಷಣ ಅಭಿಯಾನದ ಉದ್ದೇಶ ಮತ್ತು ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಆಶಾಲತಾ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮ ವನ್ನು ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ಅಂಗನವಾಡಿ ಸಹಾಯಕಿ ಆಶಾ ವಂದಿಸಿದರು.
Advertisement. Scroll to continue reading.
