ವರದಿ: ದಿನೇಶ್ ರಾಯಪ್ಪನಮಠ
ಕೋಟ: ಕೋಟದ ಅಮೃತೇಶ್ವರಿ ದೇವಳದಲ್ಲಿ ಪೂಜಿಸಲ್ಪಟ್ಟ ಕೋಟ 46ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಕಾರ್ಯಕ್ರಮ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅರ್ಚಕ ಮಧುಸೂಧನ್ ಐತಾಳ್ ಶ್ರೀದೇವರ ಗಂಧ ಪ್ರಸಾದ ವಿತರಿಸಿದರು. ಸಮಿತಿಯ ಅಧ್ಯಕ್ಷ ರಮಾನಾಥ ಜೋಗಿ ಸಚಿವರಿಗೆ ಶಾಲು ಹೋದಿಸಿ ಗೌರವಿಸಿದರು.

ಸಮಿತಿಯ ಪ್ರಮುಖರಾದ ಮಹಾಬಲ ಆಚಾರ್ಯ, ಚಂದ್ರಶೇಖರ ಆಚಾರ್ಯ, ಚಂದ್ರ ಪೂಜಾರಿ, ಆನಂದ ದೇವಾಡಿಗ, ಗಣೇಶ್ ಪೂಜಾರಿ, ಗಣೇಶ್ ಕುಂದರ್, ಶೀಲರಾಜ್ ಕಾಂಚನ್, ವಳಮಾಡು ಸೋಮ ಮರಕಾಲ, ರವೀಂದ್ರ ಜೋಗಿ, ರಾಘವೇಂದ್ರ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.
Advertisement. Scroll to continue reading.

In this article:Diksoochi news, diksoochi Tv, diksoochi udupi, kota amrutheshwari temple, kota shrinivas Poojary
Click to comment

































