ಶ್ರೀಲಂಕಾದ ತಂಡದ ಪ್ರಮುಖ ವೇಗಿ ಲಸಿತ್ ಮಾಲಿಂಗ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಮಾಲಿಂಗ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ನಿವೃತ್ತಿ ಘೋಷಿಸಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ʼಗೆ ವಿದಾಯ ಹೇಳಿರುವ ಮಾಲಿಂಗ ಇನ್ನು ಮುಂದೆ ಲೀಗ್ ಕ್ರಿಕೆಟ್ʼನಲ್ಲೂ ಆಡುವುದಿಲ್ಲ ಎಂದು ತಿಳಿಸಿದ್ದಾರೆ.
ಟ್ವೀಟ್ ಮೂಲಕ ನಿವೃತ್ತಿ ಘೋಷಿಸಿದ ಲಸಿತ್ ಮಾಲಿಂಗ, “ನಾನು ಈಗ ಪ್ರತಿಯೊಂದು ಕ್ರಿಕೆಟ್ ಮಾದರಿಗೂ ವಿದಾಯ ಹೇಳುತ್ತಿದ್ದೇನೆ. ನನ್ನನ್ನ ಬೆಂಬಲಿಸಿದವರಿಗೆ ಧನ್ಯವಾದಗಳು. ಈಗ ನಾನು ಮುಂಬರುವ ವರ್ಷಗಳಲ್ಲಿ ಯುವ ಕ್ರಿಕೆಟಿಗರೊಂದಿಗೆ ನನ್ನ ಅನುಭವಗಳನ್ನು ಹಂಚಿಕೊಳ್ಳುತ್ತೇನೆ’ ಎಂದಿದ್ದಾರೆ.
Advertisement. Scroll to continue reading.