ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕೊರೋನಾ ಹಿನ್ನೆಲೆಯಲ್ಲಿ ಶ್ರೀಮುರಳಿ ಈಗಾಗಲೇ ಅಭಿಮಾನಿಗಳಲ್ಲಿ ಮನೆಯ ಸಮೀಪ ಬಾರದಂತೆ ಹೇಳಿದ್ದರು. ಹಾಗಾಗಿ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.
ಇದರೊಂದಿಗೆ ಮದಗಜ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಟೀಸರ್ ರಿಲೀಸ್ ಮಾಡಿದ್ದಾರೆ.
ಎಂದಿನಂತೆ ಟೀಸರ್ನಲ್ಲಿ ರೋರಿಂಗ್ ಸ್ಟಾರ್ ಆರ್ಭಟವಿದೆ.
ಸಕತ್ ಡೈಲಾಗ್ ಇದೆ. ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಮೂವಿ ಅನ್ನೋದು ಟೀಸರ್ ನೋಡಿದ್ರೇನೆ ಗೊತ್ತಾಗುತ್ತೆ. ಟೀಸರ್ ನೋಡಿರೋ ಅಭಿಮಾನಿಗಳು ಶ್ರೀಮುರಳಿ ಮಾಸ್ ಲುಕ್ಗೆ ಫುಲ್ ಖಷ್ ಆಗಿದ್ದಾರೆ.
ಅಂದಹಾಗೆ ಮದಗಜನಿಗೆ ಮಹೇಶ್ ಆಕ್ಷನ್ ಕಟ್ ಹೇಳಿದ್ದು, ಉಮಾಪತಿ ಬಂಡವಾಳ ಹೂಡಿದ್ದಾರೆ. ರವಿ ಬಸ್ರೂರು ಸಂಗೀತವಿದೆ. ಆಶಿಕಾ ರಂಗನಾಥ್ ಶ್ರೀಮುರಳಿಗೆ ಜೊತೆಯಾಗಿದ್ದಾರೆ.
Advertisement. Scroll to continue reading.

In this article:ashikaranganath, Diksoochi news, kannadafilms, Madagaja, madagajafirstlookteaser, ravibasruru, sandalwoodnews, smaheshkumar, sriimurali

Click to comment