Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಕೋಟತಟ್ಟು ಗ್ರಾ.ಪಂ.ಸದಸ್ಯರ ನೇತೃತ್ವದಲ್ಲಿ ಗೋವಿಗಾಗಿ ಮೇವು ಕಾರ್ಯಕ್ರಮ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಗೋವಿಗಾಗಿ ಮೇವು ಅಭಿಯಾನದ ಅಂಗವಾಗಿ ಇಂದು ಕೋಟತಟ್ಟು ಗ್ರಾಮಪಂಚಾಯತ್ ನ 5ನೇ ವಾರ್ಡ್ ನ ಸದಸ್ಯರಾದ ವಿದ್ಯಾ ಸಾಲ್ಯಾನ್, ರಾಬರ್ಟ್ ರೋಡ್ರಿಗಸ್, ಸಹೀರಾ ಬಾನು ಇವರ ನೇತ್ರತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಪರಿಕಲ್ಪನೆಯಡಿ ರಸ್ತೆಯ ಇಕ್ಕೆಲಗಳ ಹಸಿ ಹುಲ್ಲನ್ನು ಕಟಾವು ಮಾಡಿ ನೀಲಾವರ ಗೋಶಾಲೆಗೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗೋವಿಗಾಗಿ ಮೇವು ಸ್ಥಾಪಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ಇಂದು 3 ಧರ್ಮಿಯರು ಸೇರಿ ಕಾರ್ಯಕ್ರಮ ಸಂಘಟಿಸಿರುವುದು ಮಾದರಿ. ಕರಾವಳಿ ಜನರ ಹಿಂದುತ್ವ, ಗೋ ಪ್ರೇಮದ ಬಗ್ಗೆ ಕೇಳಿದ್ದೆ. ಆದರೆ ಗೋವಿಗಾಗಿ ಮೇವು ಅಭಿಯಾನ ಆರಂಭವಾದ ನಂತರ ನೀವು ಮಾಡಿರುವ ಸೇವೆ ಮಾತಿನಲ್ಲಿ ಬಣ್ಣಿಸಲಸಾಧ್ಯ ಎಂದರು. ಹಿರಿಯ ಪ್ರಗತಿಪರ ಕ್ರಷಿಕ ರವೀಂದ್ರ ಐತಾಳ್ ಇವರನ್ನು ಗೋವಿಗಾಗಿ ಮೇವು ಸಂಘಟನೆ ವತಿಯಿಂದ ಗೌರವಿಸಲಾಯಿತು.

ಗೋವಿಗಾಗಿ ಮೇವು ಚಿಕ್ಕಮಗಳೂರು ಉಸ್ತುವಾರಿ ನಾಗೇಂದ್ರ ಪುತ್ರನ್ , ಗ್ರಾಮಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ, ಗೋವಿಗಾಗಿ ಮೇವು ಕೋಟ ವಲಯಾದ್ಯಕ್ಷ ಪ್ರದೀಪ್ ಪೂಜಾರಿ, ಗ್ರಾ.ಪಂ ಸದಸ್ಯೆ ಪೂಜಾ ಹಂದಟ್ಟು, ಅರಮ ವಿಜಯ ಸ್ಪೋರ್ಟ್ಸ್ ಕ್ಲಬ್ ಪಡುಕೆರೆ ಅಧ್ಯಕ್ಷ ರವೀಂದ್ರ ಕಾಂಚನ್, ಪಾಂಚಜನ್ಯ ಯುವಕ ಮಂಡಲ ಕೋಟ ಅಧ್ಯಕ್ಷ ಕೃಷ್ಣಮೂರ್ತಿ, ಗೌರವ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ, ಅರಮವಿಜಯ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!