ವರದಿ: ಶ್ರೀದತ್ತ ಹೆಬ್ರಿ
ಹೆಬ್ರಿ : ಶಾಂತಿನಿಕೇತನ ಯುವ ವೃಂದವು ಹೆಬ್ರಿ ಪರಿಸರದಲ್ಲಿ ವಿನೂತನವಾಗಿ ಗುರುತಿಸಿಕೊಂಡಿರುವ ಸಂಸ್ಥೆ. ಸಂಘದ ಆಲೋಚನೆಗಳು ವಿಭಿನ್ನವಾಗಿದ್ದು, ಆತ್ಮ ನಿರ್ಭರ ಭಾರತದ ಯಶಸ್ಸಿನ ಕಲ್ಪನೆಯಲ್ಲಿ ಬೆಳೆಯುತ್ತಿದೆ ಎಂದು ಹೆಬ್ರಿ ರಾಘವೇಂದ್ರ ಟ್ರಸ್ಟ್ ನ ಅಧ್ಯಕ್ಷೆ ಡಾ.ಭಾರ್ಗವಿ ಆರ್ ಐತಾಳ್ ಹೇಳಿದರು.
ಅವರು ಬೇಳಂಜೆಯಲ್ಲಿ ಶಾಂತಿನಿಕೇತನ ಯುವ ವೃಂದ ದ ಅಂಗಸಂಸ್ಥೆಯಾದ ಶಾಂತಿನಿಕೇತನ ಸೌಹಾರ್ದ ಸಹಕಾರಿ ನಿಯಮಿತದ ಒಂದು ವರ್ಷದ ಸವಿನೆನಪಿಗಾಗಿ ಶಾಂತಿನಿಕೇತನ ಸೇವಾಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಂತಿನಿಕೇತನದ ಅಧ್ಯಕ್ಷ ರಾಜೇಶ್ ಮಾತನಾಡಿ, ಮುಂದಿನ ವರ್ಷ ನಮ್ಮ ಸಂಘವು ದಶಮಾನದ ಸಂಭ್ರಮದಲ್ಲಿದೆ. ಈ ನಿಟ್ಟಿನಲ್ಲಿ ಇನ್ನು ಮಹತ್ತರ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ನಿತ್ಯ ನಿರಂತರ ಗ್ರಾಮೀಣ ಭಾಗದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಗಳಾಗುತ್ತೇವೆ ಎಂದರು.
ಸೇವಾ ಕೇಂದ್ರಕ್ಕೆ ಉದ್ಯಮಿ ಹರೀಶ್ ಶೆಟ್ಟಿ ಹಾಗೂ ಗ್ರಾ ಪಂ ಸದಸ್ಯ ಮಹೇಶ್ ಶೆಟ್ಟಿ ಚಾಲನೆ ನೀಡಿದರು.

ಆಟೋ ಸೇವೆಗೆ ತಾಪಂ ಮಾಜಿ ಸದಸ್ಯ ಅಮೃತ ಕುಮಾರ್ ಶೆಟ್ಟಿ ನಿಶಾನೆ ತೋರಿದರು.

ಈ ಸಂದರ್ಭದಲ್ಲಿ ಶಾಂತಿನಿಕೇತನ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ರವೀಶ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರೇಂದ್ರ ಎಸ್, ವಿವೇಕಾನಂದ ಯುವ ವೇದಿಕೆಯ ಅಧ್ಯಕ್ಷ ಮಿಥುನ್ ಶೆಟ್ಟಿ, ಮುಖಂಡ ಸುಧಾಕರ ಶೆಟ್ಟಿ, ಶಿಕ್ಷಕರಾದ ನಿತ್ಯಾನಂದ ಶೆಟ್ಟಿ ಮತ್ತು ಮೋಹನ್, ನಿರ್ದೇಶಕರುಗಳಾದ ಜಯಕರ್, ದೀಕ್ಷಿತ್, ಸಂದೇಶ್ ಕುಲಾಲ್, ಕೆ ಗಣೇಶ್, ವಿಜಯಕುಮಾರ್, ಆಡಳಿತ ಮಂಡಳಿ ಸದಸ್ಯರಾದ ನಾಗರಾಜ್, ನವೀನ್,ರಾಜೇಶ್ರೀ, ರಾಘವೇಂದ್ರ ಹಾಗೂ ಪ್ರಸನ್ನ ಉಪಸ್ಥಿತರಿದ್ದರು.


































