ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಬ್ರಹ್ಮಾವರ ತಾಲೂಕು ತಹಶೀಲ್ದಾರ್ ರಾಜಶೇಖರ ಮೂರ್ತಿ ಕೋಟ ಹೋಬಳಿಯಲ್ಲಿರುವ ಅನೇಕ ಭಾಗದ ಕೊರಗ ಕಾಲೋನಿಗೆ ಭೇಟಿ ನೀಡಿ ಅವರ ಕುಂದು ಕೊರತೆಗಳ ಪರಿಶೀಲನೆ ಗುರುವಾರ ನಡೆಸಿದರು.
ಕಕ್ಕುಂಜೆ, ವಂಡಾರು, ಶಿರೂರು, ಹೆಗ್ಗುಂಜೆ, ಬಿಲ್ಲಾಡಿ, ಹೇರಾಡಿ, ಹನೆಹಳ್ಳಿ ಭಾಗದಲ್ಲಿರುವ ಕೊರಗ ಸಮುದಾಯದ ಮನೆಗಳಿಗೆ ತೆರಳಿ ಕೊರಗ ಸಮುದಾಯದವರೊಂದಿಗೆ ಕೆಲವು ಹೊತ್ತು ಕಳೆದು ಅವರ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಕಂಡುಕೊಂಡು ಬಳಿಕ ಸೂಕ್ತ ಪರಿಹಾರ ಮಾಡುವುದಾಗಿ ಹೇಳಿದರು.

ಕೋಟ ಹೋಬಳಿ ಕಂದಾಯ ನೀರೀಕ್ಷಕ ರಾಜು, ಗ್ರಾಮ ಲೆಕ್ಕಿಗರಾದ ವಿಜಯ ಕುಮಾರ್, ರಾಘವೇಂದ್ರ, ಗಿರೀಶ್ ಕುಮಾರ್, ಶರತ್ ಶೆಟ್ಟಿ, ಭೀಮರಾಜ್ ಹೊರಟ್ಟಿ, ಮತ್ತು ಪ್ರತೀ ಗ್ರಾಮ ಪಂಚಾಯತಿ ಅಧ್ಯಕ್ಷರು ಅಭಿವೃದ್ಧಿ ಅಧಿಕಾರಿಗಳು, ಕೊರಗ ಸಮುದಾಯದ ಮುಖಂಡರುಗಳಾದ ಗಣೇಶ ಬಾರಕೂರು, ಸಂಜೀವ ಇನ್ನಿತರರು ಜೊತೆಯಲ್ಲಿದ್ದರು.
Advertisement. Scroll to continue reading.



































