ಕೋಲಾರ : ಟಮಕ ಬಳಿ 16 ಕೋತಿಗಳ ಮೃತದೇಹ ಪತ್ತೆಯಾಗಿವೆ. ಹಾಸನದಲ್ಲಿ 40 ಕೋತಿಗಳ ಮಾರಣಹೋಮ ಪ್ರಕರಣ ಮಾಸುವ ಮುನ್ನವೇ ಕೋಲಾರದಲ್ಲಿ ಈ ಘಟನೆ ನಡೆದಿದೆ.
ಕಿಡಿಗೇಡಿಗಳು ಆಹಾರದಲ್ಲಿ ವಿಷ ಉಣಿಸಿ ಸಾಯಿಸಿ ಚೀಲಗಳಲ್ಲಿ ಬಿಸಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಘಟನೆ ಸಂಬಂಧ ಮೃತಪಟ್ಟಿರುವ ಕೋತಿಗಳನ್ನು ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆದಿದೆ.
Advertisement. Scroll to continue reading.