Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಹಿರಿಯ ಯಕ್ಷಗಾನ ಕಲಾವಿದ ಎಂ.ಕೆ. ರಮೇಶ್ ಆಚಾರ್ಯರಿಗೆ ಅಭಿನಂದನೆ ಮತ್ತು ಗ್ರಂಥ ಗೌರವ ಸಮಾರಂಭ

0

ವರದಿ : ಬಿ.ಎಸ್.ಆಚಾರ್ಯ

ಉಡುಪಿ : ಹಿರಿಯ ಯಕ್ಷಗಾನ ಕಲಾವಿದ ಎಂ. ಕೆ. ರಮೇಶ್ ಆಚಾರ್ಯರಿಗೆ ಅಭಿನಂದನೆ ಮತ್ತು ಗ್ರಂಥ ಗೌರವ ಸಮಾರಂಭ ಶನಿವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರುಗಿತು. ಉಡುಪಿ ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮತ್ತು ಆನೆಗುಂದಿ ಮಹಾಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಹೊರನಾಡು ಶ್ರೀಅನ್ನಪೂರ್ಣೇಶ್ವರೀ ದೇವಸ್ಥಾನದ ಧರ್ಮಕರ್ತ ಭೀಮೇಶ್ವರ ಜೋಷಿ ಅಭಿನಂದನಾ ಗ್ರಂಥ ಯಕ್ಷಾಂಗನೆ ಬಿಡುಗಡೆ ಮಾಡಿದರು. ಯಕ್ಷಗಾನ ಕಲಾವಿದ ಉಜಿರೆಅಶೋಕ್ ಭಟ್ ಅಭಿನಂದನ ಭಾಷಣ ಮಾಡಿದರು. ಎಂ ಕೆ . ರಮೇಶ್ ಆಚಾರ್ಯ ದಂಪತಿಗಳನ್ನು ಸನ್ಮಾನಿಸಿ ರೂ. ಒಂದು ಲಕ್ಷ ನಿಧಿ ಸಮರ್ಪಣೆ ಮಾಡಲಾಯಿತು.ಅನೇಕ ಅಭಿಮಾನಿಗಳು ಕೂಡಾ ಆಚಾರ್ಯರನ್ನು ಅಭಿನಂದಿಸಿದರು.

Advertisement. Scroll to continue reading.

ಅಭಿನಂದನೆ ಸ್ವೀಕರಿಸಿದ ಎಂ ಕೆ .ರಮೇಶ್ ಆಚಾರ್ಯ ಮಾತನಾಡಿ, ಕಲಾವಿದರಿಗೆ ಅವಕಾಶ ನೀಡುವ ಮೇಳಗಳ ಯಜಮಾನರು ಕಲಾವಿದರನ್ನು ಬೆಳೆಸಲು ಕಾರಣರಾಗುತ್ತಾರೆ. ಕಲಾವಿದರನ್ನು ಗುರುತಿಸಿಸುವ ಮತ್ತು ಗೌರವಿಸುವ ಕಲಾಪೋಷಕರು ಹೆಚ್ಚು ಹೆಚ್ಚು ಕಡೆ ನಡೆಯಬೇಕು ಎಂದರು.

ನಿವೃತ್ತ ಐ.ಎ.ಎಸ್ ಅಧಿಕಾರಿ ಡಾ.ಟಿ, ಶ್ಯಾಮ್ ಭಟ್, ಮುಂಬಾಯಿ ಉದ್ಯಮಿ ಕಡಂದಲೆ ಸುರೇಶ್ ಭಂಡಾರಿ , ಉಡುಪಿ ಉದ್ಯಮಿ ಪಿ ವಿ.ಗಂಗಾಧರ ಆಚಾರ್ಯ, ಸಮಿತಿಯ ಗೌರವಾಧ್ಯಕ್ಷ ತಲ್ಲೂರು ಶಿವರಾಮ್ ಶೆಟ್ಟಿ , ಅಧ್ಯಕ್ಷ ಜಿ.ಟಿ ಆಚಾರ್ಯ, ಸಂಚಾಲಕ ವಿಜಯಕುಮಾರ್ ಮುದ್ರಾಡಿ, ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಶಶಿ ಎಸ್ ಮಂಗಳಗಾರ್, ಯಕ್ಷಗಾನ ವಿದ್ವಾಂಸ ಕೆ.ಎಲ್. ಕುಂಡಂತಾಯ ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!