ವರದಿ : ದಿನೇಶ್ ರಾಯಪ್ಪನಮಠ
ಕೋಟ: ಕಳೆದ ಎರಡು ವಾರಗಳಿಂದ ಸ್ವಯಂ ಪ್ರೇರಿತವಾಗಿ ಸರ್ವೋದಯ ಯುವಕ ಮಂಡಲದ ಯುವಕರು ಬಾಳ್ಕುದ್ರು ಗ್ರಾಮದ ಸ್ವಚ್ಚತಾ ಕಾರ್ಯಕ್ಕೆ ಅಣಿಯಾಗಿದ್ದು ,ಮೂರನೇ ವಾರದ ಸ್ವಚ್ಚತಾ ಕಾರ್ಯಕ್ರಮಕ್ಕೆ ಗ್ರಾಮದ ಹಿಂದೂ ರುದ್ರಭೂಮಿ ಸ್ವಚ್ಛಗೊಳಿಸುವ ಮೂಲಕ ಚಾಲನೆ ನೀಡಲಾಯಿತು.
ಈ ನಿಟ್ಟಿನಲ್ಲಿ ರುದ್ರಭೂಮಿಗೆ ತೆರಳುವ ರಸ್ತೆಯ ಕಡೆಗಳಲ್ಲಿ ಬಾರಿ ಗಾತ್ರದ ಹುಲ್ಲುಗಳು ಬೆಳೆದಿದ್ದು ,ಸತ್ತ ಶವಗಳನ್ನು ರುದ್ರಭೂಮಿಗೆ ಸಾಗಿಸುವಾಗ ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗುತ್ತಿತ್ತು. ಇದಲ್ಲದೆ ಶವಗಳನ್ನು ಹೊತ್ತು ತರುವ ಅಂಬುಲೆನ್ಸ್ ಚಾಲಕರಿಗೂ ತಮ್ಮ ಗಾಡಿ ತಿರುಗಿಸಲು ಸಮಸ್ಯೆಯಾಗುತ್ತಿದ್ದನ್ನು ಮನಗಂಡ ಯುವಕ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು ರಸ್ತೆಯನ್ನು ತೆರವುಗೊಳಿಸಿ ರಸ್ತೆಯನ್ನು ಗುಡಿಸುವುದರ ಮೂಲಕ ಶುಚಿತ್ವಗೊಳಿಸಿದರು.
Advertisement. Scroll to continue reading.



































