ಬೆಳ್ತಂಗಡಿ : ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿ ಉತ್ಸವವು ಇದೇ ಬರುವ ಅಕ್ಟೋಬರ್ 7ನೇ ಗುರುವಾರದಿಂದ ಅಕ್ಟೋಬರ್15 ರ ಶುಕ್ರವಾರದವರೆಗೆ ನಡೆಯಲಿದೆ.
ನವರಾತ್ರಿ ಉತ್ಸವದ ಪ್ರತಿದಿನ ಶ್ರೀ ಕ್ಷೇತ್ರದಲ್ಲಿ ಚಂಡಿಕಾ ಹೋಮ ಹಾಗೂ ವಿಶೇಷ ಪೂಜೆ ನಡೆಯಲಿದ್ದು,
ಅಕ್ಟೋಬರ್ 12 ರಿಂದ ಅಕ್ಬೋಬರ್ 14 ರ ವರೆಗೆ ಅಕ್ಷರಭ್ಯಾಸ ( ಬೆಳಿಗ್ಗೆ 09.00 ರಿಂದ 11.00 ಗಂಟೆಯ ವರೆಗೆ ) ನಡೆಯಲಿರುವುದು.
ಅಕ್ಟೋಬರ್ 13 ರಂದು ಬುಧವಾರದಂದು ಬೆಳಗ್ಗೆ 9 ಗಂಟೆಗೆ ಶ್ರೀ ಕಾಳಿಗುಡಿಯಲ್ಲಿ ತೆನೆ ಪೂಜೆ, ಮಧ್ಯಾಹ್ನ ವಿಶೇಷ ಪೂಜೆ ಹಾಗೂ ರಾತ್ರಿ ಹೂವಿನ ಪೂಜೆ, ರಂಗಪೂಜೆ, ವಾಹನ ಪೂಜೆ ಜರಗಲಿರುವುದು.
ಅಕ್ಟೋಬರ್ 14 ರ ಗುರುವಾರದಂದು ಸಂಜೆ 05:00 ಗಂಟೆಯಿಂದ ವಾಹನ ಪೂಜೆ, ಶ್ರೀ ಮೂಲದುರ್ಗಾ ದೇವಿಗೆ ರಾತ್ರಿ ಹೂವಿನ ಪೂಜೆ, ರಂಗ ಪೂಜೆ ನಡೆಯಲಿದೆ.
ಅಕ್ಟೋಬರ್ 15 ರ ಶುಕ್ರವಾರ ಸಾರ್ವಜನಿಕ ಚಂಡಿಕಾಹೋಮ ನಡೆಯಲಿರುವುದು.
ಶ್ರೀ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮುಖಗವಸನ್ನು ಧರಿಸಿ, ಭಾಗವಹಿಸಿ, ಶ್ರೀದುರ್ಗಾಕಾಳಿಕಾಂಬ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಶ್ರೀ ಕ್ಷೇತ್ರದ ಸಂಸ್ಥಾಪಕರು, ಆಡಳಿತ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಶ್ರೀಕ್ಷೇತ್ರ ಸವಣಾಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.

