Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಶ್ರೀಕೃಷ್ಣ ಚಿಕನ್ ಸ್ಟಾಲ್ 3ನೇ ಶಾಖೆ ಶುಭಾರಂಭ

0

ಬ್ರಹ್ಮಾವರ: 38 ವರ್ಷದಿಂದ ಜನಪ್ರಿಯವಾಗಿದ್ದ ಶ್ರೀ ಕೃಷ್ಣ ಚಿಕನ್ ಸ್ಟಾಲ್ 3ನೇ ಶಾಖೆಯಾಗಿ ಶುಕ್ರವಾರ ಸಾಸ್ತಾನ ಬಸ್ ನಿಲ್ದಾಣದ ಬಳಿ ಸುಸಜ್ಜಿತವಾದ ವಿಶಾಲ ಜಾಗದಲ್ಲಿ ನೂತನ ತಂತ್ರಜ್ಞಾನದೊಂದಿಗೆ ಆರಂಭಗೊಂಡಿದೆ.
ಡಾಕ್ಟರ್ ಕೆ.ಪಿ ಶೆಟ್ಟಿ ದೀಪ ಬೆಳಗಿಸಿದ ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಈ ಸಂದರ್ಭ ಬ್ರಹ್ಮಾವರದ ಉದ್ಯಮಿ ಬಿರ್ತಿ ರಾಜೇಶ್ ಶೆಟ್ಟಿ ಮಾತನಾಡಿ ಗುಣಮಟ್ಟದ ಸೇವೆ ಮತ್ತು ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡುವ ಇಂದಿನ ದಿನಗಳಲ್ಲಿ ಜನರೀಗೆ ಬೇಕಾಗುವ ರೀತಿಯಲ್ಲಿ ಈ ಸಂಸ್ಥೆ ಮಾಡಿದೆ ಇವರ ಉದ್ಯಮಕ್ಕೆ ಯಶಸ್ಸು ಸಿಗಲಿ ಎಂದರು.
ಡಾ.ಹೇಮಂತ್ ಕುಮಾರ್, ಉದ್ಯಮಿ ಕೇಶವ ಕುಂದರ್ ಡೆರಿಕ್ ಡಿ’ಸೋಜಾ, ಬ್ರಹ್ಮಾವರ ವ್ಯವಸಾಯಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಇರ್ಮಾಡಿ ತಿಮ್ಮಪ್ಪ ಹೆಗ್ಡೆ , ವಿಠಲ್ ಶೆಟ್ಟಿ, ಚಾಂತಾರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮೀರಾ ಸದಾನಂದ ಪೂಜಾರಿ, ಅನಂತ ನಾಯಕ್ , ಬಿ ಎನ್ ಶಂಕರ ಪೂಜಾರಿ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಸಂಸ್ಥೆಗೆ ಶುಭ ಹಾರೈಸಿದರು.


ಸಂಸ್ಥೆಯ ಮಾಲಕರಾದ ನಾರಾಯಣ ಮರಕಾಲ , ಮಕ್ಕಳಾದ ರಮೇಶ್ ಮರಕಾಲ, ರಾಜೇಶ್ ಮರಕಾಲ ಅತಿಥಿಗಳನ್ನು ಗೌರವಿಸಿದರು.
ಶ್ರೀ ಕೃಷ್ಣ ಪೌಲ್ಟ್ರಿ ಮತ್ತು ಫೀಡ್ಸ್‍ನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!