ಶಿರ್ವ : ಶಿರ್ವದ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ಇತ್ತೀಚೆಗೆ ಮೂಡುಬೆಳ್ಳೆಯ ಸಂತ ಲಾರೆನ್ಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ದೀಪ ಬೆಳಗುವ ಮುಖೇನ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ದಿವ್ಯಧಾಮ ಮೂಡುಬಿಲ್ಲೆ ಇದರ ಆಡಳಿತಗಾರ ಧರ್ಮಗುರು ರೆ|ಫಾ|ಸಿರಿಲ್ ಲೋಬೋರವರು ಆಶೀರ್ವಚನ ನೀಡಿದರು.
ಸಂತ ಮೇರಿ ಮತ್ತು ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಗಳ ಸಂಚಾಲಕ ವೆ.ರೆ.ಫಾ.ಡಾ.ಲೆಸ್ಲಿ ಕ್ಲೀಫರ್ಡ್ ಡಿಸೋಜಾ ರವರ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ದಿವ್ಯಾ ಆಚಾರ್ಯ ಎಲ್ಲಾ ವಿದ್ಯಾರ್ಥಿಗಳು ಎನ್ಎಸ್ಎಸ್ ಸ್ವಯಂಸೇವಕರು ನಶಾ ಮುಕ್ತ ಭಾರತ ಅಭಿಯಾನವನ್ನು ಹಸನುಗೊಳಿಸಲು ಕರೆ ನೀಡಿದರು.
ಶಿರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಹೆರಾಲ್ಡ್ ಐವನ್ ಮೊನಿಸ್ರವರು ಎನ್ಎಸ್ಎಸ್ ಘಟಕಕ್ಕೆ ಶುಭ ಹಾರೈಸಿದರು. ಶಿರ್ವ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಮೇಲ್ಜಿನ್ ಅರಾನ್ಹ ರವರು ಎನ್ಎಸ್ಎಸ್ ನಲ್ಲಿ ರಾಷ್ಟ್ರ ಸೇವೆ ಲಭ್ಯ ಇದರ ಸ್ವಯಂಸೇವಕರು ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಎಂದು ಹರಸಿದರು.
ಮೂಡುಬೆಳ್ಳೆ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ CA ಪ್ರೀತೇಶ್ ಬರ್ಟನ್ ಡೆಸಾ ಅವರು ಶಿರ್ವಕ್ಕೂ ಮೂಡುಬೆಳ್ಳೆಗೂ ಘಟಕದ ಬಾಂಧವ್ಯ ಇದೆ. ಅತಿಥೇಯ ಸಂಸ್ಥೆಯಾಗಿ, ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಉದಾತ್ತವಾಗಿ ಸಂದೇಶ ನೀಡಿದರು. ತಾಲೂಕು ಪಂಚಾಯತ್ ಮಾಜಿ ಸದಸ್ಯ ಲಯನ್ ದೇವದಾಸ್ ಹೆಬ್ಬಾರ್ ಎನ್.ಎಸ್.ಎಸ್ ಹಾಗೂ ರಾಷ್ಟ್ರ ಸೇವೆಯ ಬಗ್ಗೆ ಶಿಬಿರಾರ್ಥಿಗಳಿಗೆ ಹಾರೈಸಿದರು.

ಶಿವ ಚರ್ಚ್ ಪಾಲನ ಮಂಡಳಿಯ ಆಯೋಗಗಳ ಸಂಯೋಜಕಿ ಲೀನಾ ಮಚಾದೊ ವೇದಿಕೆಯಲ್ಲಿದ್ದು, ಶಿಬಿರದ ಯೋಜನಾಧಿಕಾರಿ ಮರಿಯಾ ಜೆಸಿಂತ ಫುರ್ಟಾಡೊ ಪ್ರಸ್ತಾವನೆಗೈದರು.
ಸಹ ಶಿಬಿರಾಧಿಕಾರಿಗಳಾದ ಶಾಲಿನಿ ಲೋಬೊ, ಗ್ಲೇನಿಷಾ ರೇಷ್ಮಾ ಮೆಂಡೋನ್ಸ, ಕೇಶವ ಪಿ, ದೀಪಿಕಾ ಮೆಂಡೋನ್ಸ, ಮ್ಯಾಕ್ಸಿಮ್ ಡಿಸೋಜಾ ಸಂತ ಮೇರಿ ಮತ್ತು ಸಂತ ಲಾರೆನ್ಸ್ ಸಂಸ್ಥೆಗಳ ಉಪನ್ಯಾಸಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಪ್ರಾಕ್ತನ ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಜಯಶಂಕರ್ ಕೆ. ಸ್ವಾಗತಿಸಿದರು. ಎನ್ಎಸ್ಎಸ್ ಸ್ವಯಂ ಸೇವಕಿ ಅಂಕಿತಾ ರಾವ್ ಮತ್ತು ನಾಯಕ ಸಿಂಚಿತ್ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಬಿರಾಧಿಕಾರಿ ರಾಯ್ ಸ್ಟನ್ ಕ್ವಾಡ್ರಸ್ ವಂದಿಸಿದರು.


































