ವರದಿ : ದಿನೇಶ್ ರಾಯಪ್ಪನಮಠ
ಕೋಟ: ಗ್ರಾಮೀಣ ಭಾಗದ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಭಿನ್ನವಾಗಿವೆ. ಈ ದಿಸೆಯಲ್ಲಿ ಪಡುಕರೆಯ ಈ ಸರಕಾರಿ ಶಾಲೆ ಕಟ್ಟಡ, ಶಿಸ್ತುಗಳೇ ಸಾಕ್ಷಿ ಎಂದು ರಾಜ್ಯದ ಪ್ರಾಥಮಿಕ ಹಾಗೂ ಫ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಶುಕ್ರವಾರ ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಾತನಾಡಿ, ಈ ಶಾಲೆಯ ವಿನ್ಯಾಸ ನೋಡಿದರೆ ನಾನೇನೂ ಯಾವುದೋ ಖಾಸಗಿ ಶಾಲೆಗೆ ಸ್ಪರ್ಶಿಸಿದ ಅನುಭವವಾಗುತ್ತಿದೆ. ವಿದ್ಯಾರ್ಥಿ ಸುಂದರ ಭವಿಷ್ಯಕ್ಕೆ ಇಲ್ಲಿನ ವಾತಾವರಣ ಪೂರಕವಾಗಿದೆ. ಯಾವುದೇ ವಿದ್ಯಾಸಂಸ್ಥೆಗಳಿರಬಹುದು. ಅಲ್ಲಿನ ಆಡಳಿತ ಮಂಡಳಿ ಸರಕಾರದ ಹಣವನ್ನು ದುರುಪಯೋಗವಾಗದೆ ವಿನಿಯೋಗಿಸಿಕೊಳ್ಳುವ ರೀತಿವನೀತಿ ಬಗ್ಗೆ ವಿಮರ್ಶಿಸಿಕೊಳ್ಳಬೇಕು. ಆಗ ಅಂತಹ ಶಾಲೆ ಬಹು ಎತ್ತರಕ್ಕೆ ಬೆಳೆಯಲು ಸಾಧ್ಯವಿದೆ.
ಕೋವಿಡ್ ಬಂದ ದಿನಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ತರಗತಿ ಹಿಮ್ಮುಖ ಕಂಡಿದೆ. ಅದನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಳಿಸಲು ಚಿಂತಿಸಲಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ಉತ್ಸುಕರಾಗಿದ್ದಾರೆ. ಸರಕಾರ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಹೆಜ್ಜೆಗಳನ್ನಿರಸಲಿದೆ. ಇದರಲ್ಲಿ ಯಾವುದೇ ಸಂಶಯಬೇಡ ಎಂದರು


ಪೂರ್ಣ ಭರವಸೆ :
ಇಲ್ಲಿನ ವಿದ್ಯಾಕ್ಷೇತ್ರವನ್ನು ಗಮನಿಸಿದಾಗ ಇಲ್ಲಿನ ಬಹುಬೇಡಿಕೆಯ ಪಿಯು ಅಥವಾ ಪಬ್ಲಿಕ್ ಸ್ಕೂಲ್ ವಾಗಿಸಲು ಎಲ್ಲಾ ರೀತಿಯ ಪ್ರಯತ್ನ ಶೀಘ್ರದಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಶಾಲೆಯ ಅಭಿವೃದ್ಧಿಗಾಗಿ ನೋವಿನಲೂ ಸಚಿವರನ್ನು ಬರಮಾಡಿಕೊಂಡರು:
ತನ್ನೂರ ವಿದ್ಯಾರ್ಥಿಗಳ ಕನಸಿಗೆ ಟೊಂಕ ಕಟ್ಟಿದವರು ಇಲ್ಲಿನ ಶೈಕ್ಷಣಿಕ ಹರಿಕಾರ ಆನಂದ್ ಸಿ ಕುಂದರ್ ಇತ್ತೀಚಿಗೆ ಎರಡು ಕಾಲುಗಳ ಮಂಡಿ ಚಿಕಿತ್ಸೆಗೊಳಗಾಗಿದ್ದು, ಸ್ಥಳೀಯ ಕಾರ್ಯಕ್ರಮಗಳಿಂದ ದೂರ ಉಳಿದ್ದಿದ್ದರು. ಆದರೆ ಶುಕ್ರವಾರ ಶಾಲೆಗೆ ದಿಢೀರ್ ಭೇಟಿ ನೀಡಿದ ಸಚಿವರನ್ನು ಶಾಲಾಭಿವೃದ್ಧಿ ದೃಷ್ಠಿಯಿಂದ ನೋವಿನಲ್ಲೂ ಬರಮಾಡಿಕೊಂಡು ಪಿಯು ಅಥವಾ ಪಬ್ಲಿಕ್ ಸ್ಕೂಲ್ ಆಗಿಸಲು ಸಚಿವರಿಗೆ ಮನವಿ ಸಲ್ಲಿಸಿ ಪ್ರಾಸ್ತಾವನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಚಿವರನ್ನು ಶಾಲಾಭಿವೃದ್ಧಿ ಸಮಿತಿ ಮೂಲಕ ಆನಂದ್ ಸಿ. ಕುಂದರ್ ಗೌರವಿಸಿದರು.
ವೇದಿಕೆಯಲ್ಲಿ ರಾಜ್ಯ ಆಹಾರನಿಗಮ ಮಂಡಳಿಯ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಒ.ಆರ್ ಪ್ರಕಾಶ್, ಶಾಲಾ ಮುಖ್ಯ ಶಿಕ್ಷಕಿ ಜಯಂತಿ, ಶಾಲಾ ಎಸ್.ಡಿ.ಎಮ್ ಸಿ ಅಧ್ಯಕ್ಷ ಜಯರಾಮ ಶೆಟ್ಟಿ, ಸಚಿವರ ಆಪ್ತಕಾರ್ಯದರ್ಶಿ ರವಿ, ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ ಅಂಕದಕಟ್ಟೆ, ಮತ್ತಿತರರು ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ನಿರಂಜನ್ ನಾಯಕ್ ಸ್ವಾಗತಿಸಿದರು. ಚಿತ್ರಪಾಡಿ ಶಾಲಾ ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ನಿರೂಪಿಸಿದರು.


































