Connect with us

Hi, what are you looking for?

Diksoochi News

ಸಾಹಿತ್ಯ

ರಾಜೇಶ್ ಭಟ್ ಪಡಿಯಾಡಿ ಲೇಖನ : ಬ್ರಹ್ಮಚಾರಿಣೀ ರೂಪದಲ್ಲಿ ದುರ್ಗೆಯ ಆರಾಧನೆ

0

ರಾಜೇಶ್ ಭಟ್ ಪಡಿಯಾಡಿ

ಮಾತಾ ಆರ್ಯ ದುರ್ಗಾ ಮಾತಾ ಬ್ರಹ್ಮಚಾರಿಣೀ ನಮಸ್ತೆ ನಮಸ್ತೆ ಜಗದೇಕಮಾತಃ

ಶರದ್ ಋತು ಆಶ್ವೀಜ ಮಾಸ ಶುಕ್ಲ ಪಕ್ಷದ ಶರನ್ನವರಾತ್ರಿಯ ದ್ವಿತೀಯ ದಿನವಾದ ಇಂದು ಆರ್ಯ ಬ್ರಹ್ಮಚಾರಿಣೀ ರೂಪದಲ್ಲಿ ದುರ್ಗೆ ಪೂಜಿಸಲ್ಪಡುತ್ತಾಳೆ. ಶುಭ್ರ ಶ್ವೇತ ವಸ್ತದಿಂದ ಕಂಗೊಳಿಸುತ್ತಿರುವ ಸೌಂದರ್ಯವತಿ ಹಿಮವಂತನ ಪುತ್ರಿ ತನ್ನ ಬಲ ಗೈಯಲ್ಲಿ ಜಪಮಣಿಯನ್ನು ಎಡ ಕೈಯಲ್ಲಿ ಕಮಂಡಲವನ್ನು ಹಿಡಿದು ನಿಂತು ಮಂದ ಹಾಸವನ್ನು ಬೀರುತ್ತಿರುವ ತೇಜೋಮಯಿ ದುರ್ಗೆ ಈಕೆ. ಮಲ್ಲಿಗೆ,ಜಾಜಿ, ಪಾರಿಜಾತ ಇತ್ಯಾದಿ ಪರಿಮಳಯುಕ್ತ ಶ್ವೇತ ವರ್ಣದ ಪುಷ್ಟಗಳು, ತುಳಸಿ ಬಿಲ್ವ ದೂರ್ವ ಇತ್ಯಾದಿ ಪತ್ರೆಗಳು ಆಕೆಗೆ ಪರಮಪ್ರಿಯ. ಗಸಗಸೆ ಪಾಯಸ, ಅನ್ನ ನೈವೇದ್ಯ ಈಕೆಗೆ ಅಚ್ಚುಮೆಚ್ಚು.
ಆರ್ಯದುರ್ಗ ಅಥವಾ ಬ್ರಹ್ಮಚಾರಿಣಿಗೆ ತನ್ನ ಪೂರ್ವಜನ್ಮದ (ಸತಿ ) ಯ ಪತಿ :ಶಿವ ನನ್ನು ಪತಿಯಾಗಿ ಪಡೆಯಲು ಸಾವಿರ ಸಾವಿರ ವರ್ಷ ಕೇವಲ ಫಲ ಸೇವಿಸಿ, ಅದೆಷ್ಟೋ ಸಮಯ ಬರೀ ಪತ್ರೆಗಳನ್ನು ಸೇವಿಸಿ, ಇನ್ನೆಷ್ಟೋ ಸಮಯ ನಿರಾಹಾರಳಾಗಿದ್ದು ಅತ್ಯಂತ ಕಠಿಣ ತಪವನ್ನು ಗೈದು ದರಿಂದ ಪಾರ್ವತಿ ದೇವಿಗೆ ಬ್ರಹ್ಮಚಾರಿಣೀ ಎಂಬ ಹೆಸರು ಪ್ರಾಪ್ತಿಯಾಗಿದೆಯಂತೆ. ಹಾಗಾಗಿ ಬ್ರಹ್ಮ ವರ್ಚಸ್ಸನ್ನು ಪಡೆದು ಬ್ರಹ್ಮಜ್ಞಾನ ಸಿದ್ಧಿಯನ್ನು ಪಡೆದ ಈಕೆಯನ್ನು ಅರ್ಥಾನುಸಂದಾನ ಪೂರ್ವಕವಾಗಿ ಪೂಜಿಸುವುದರಿಂದ ಜ್ಞಾನಾಭಿವೃದ್ಧಿಯನ್ನು ಆರೋಗ್ಯ ಆಯುಷ್ಯ ಉತ್ಸಾಹ ಸಂತೋಷಗಳನ್ನು ನಿಸ್ಸಂದೇಹವಾಗಿ ಕರುಣಿಸುತ್ತಾಳೆ. ಈಕೆ ಅದೆಷ್ಟೋ ವರ್ಷ ಕೇವಲ ಪತ್ರೆಯನ್ನು ಸೇವಿಸಿ ತಪಸ್ಸನ್ನು ಆಚರಿಸಿದ್ದರಿಂದ ಈಕೆಗೆ ಅಪರ್ಣಾ ಎಂದೂ ಕರೆಯುತ್ತಾರೆ.
ಧಧಾನಾ ಕರ ಪದ್ಮಾಭ್ಯಾಕ್ಷಮಾಲಾ ಕಮಂಡಲೂ ದೇವಿಪ್ರಸೀದತು ಮಯಿ ಬ್ರಹ್ಮಚಾರಿಣನುತ್ತಮಾ ” ಎಂಬ ಮಂತ್ರವನ್ನು ಪಠಿಸಿ ಪೂಜಿಸಿದರೆ ಸರ್ವಕಾಮಾರ್ಥಸಿದ್ಧಿಯಾಗುವುದು ಎಂದು ಶಾಸ್ತ್ರ ಹೇಳುತ್ತದೆಯಂತೆ.
ಇನ್ನು ಈ ಮಾತೆಗೆ ಪಚ್ಚೆಯ ಉಡುಗೆ ತೊಟ್ಟು ಪೂಜಿಸಿದರೆ ಬಹಳ ಶುಭ. ಎರಡನೇ ನವರಾತ್ರಿಗೆ ಪಚ್ಚೆ ಬಣ್ಣ ಶ್ರೇಷ್ಟವಾದರೆ ಇಂದಿನ ದಿನ ಶುಕ್ರವಾರಕ್ಕೆ ಶ್ವೇತ ವರ್ಣ ವಿಶೇಷ. ಬಿಳಿಯ ಬಣ್ಣ ಜ್ಞಾನದ, ಶಾಂತಿಯ ಸಂಕೇತವಾದರೆ ಪಚ್ಚೆಯ ಬಣ್ಣ ಸಮೃದ್ಧಿಯ ಸಂಕೇತ. ಇದು ಮನಸ್ಸಿಗೆ ಖುಷಿ, ನೆಮ್ಮದಿ, ಸಂತೋಷದ ಜೊತೆಗೆ ಸೌಭಾಗ್ಯ ಸಂಪದಭಿವೃದ್ಧಿ ಮಾಡುವ ಸಕಲ ಶಕ್ತಿಯನ್ನು ಹೊಂದಿದೆ. ಹಾಗಾಗಿ ಈ ದಿನ ಮುಖ್ಯವಾಗಿ ಮಾತೆಯರು ಪಚ್ಚೆ ಸೀರೆಯನ್ನು ತೊಟ್ಟು ದೇವರನ್ನು ಪೂಜಿಸುತ್ತಾರೆ. ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ ವಂದೇ ಮಾತರಂ ಹೌದು ಹಚ್ಚ ಹರಿದ್ವರ್ಣ ಸಿರಿ ಪ್ರಕೃತಿ ಭೂಮಾತೆ – ಭಾರತ ಮಾತೆಯು ಕೂಡ ಬಿಗಿದುಟ್ಟ ಹಸಿರ ಸೀರೆಯಂತೆ ಕಂಗೊಳಿಸುತ್ತದೆ. ಹಾಗಾಗಿ ಈ ಹಬ್ಬ ದೇಶಕ್ಕೂ ಶುಭ ನೀಡಲಿ. ಪಚ್ಚೆ ಬಣ್ಣ ಶುಭ ಕಣ್ಣಿಗೆ ಹಬ್ಬ. ಒಟ್ಟಾರೆ ಶರನ್ನವರಾತ್ರಿಯ ಈ ಪುಣ್ಯಪರ್ವ ಕಾಲದಲ್ಲಿ ಆರ್ಯ ದುರ್ಗಾಮಾತೆಯು ಮನುಕುಲವನ್ನು ಸದಾ ಪೊರೆಯಲಿ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

2 ಶಿರ್ವ : ಶಿರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಮಹಿಳಾ ಸಂಘ ‘ಧಾರಿಣಿ’ಯ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರಿತಾ ಆಲ್ವ,  ಯಶಸ್ಸು ಎನ್ನುವುದು ರಾತ್ರೋ ರಾತ್ರಿ...

error: Content is protected !!