Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಬೆಳ್ಳಂಪಳ್ಳಿ ಶಿವ ದುರ್ಗ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಲಾಂಛನ ಬಿಡುಗಡೆ

0

ಉಡುಪಿ : ಶಿವ ದುರ್ಗ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಬೆಳ್ಳಂಪಳ್ಳಿ ಇದರ ಲಾಂಛನ ಬಿಡುಗಡೆ ಕಾರ್ಯಕ್ರಮ ದುರ್ಗಾಪರಮೇಶ್ವರಿ ದೇವಸ್ಥಾನ ವಠಾರದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಮುಖ್ಯಸ್ಥ ಗೋವಿಂದರಾಜ್ ಹೆಗ್ಡೆ ಮಾತನಾಡಿ, ಕೊರಗಜ್ಜ ದೈವಸ್ಥಾನದ ಪ್ರಸ್ತುತ ನಮ್ಮ ದಿನಗಳಲ್ಲಿ ಯುವಕರು ಎಲ್ಲಾ ಒಟ್ಟಾಗಿ ಸಾಂಸ್ಕೃತಿಕ ಆಚಾರ-ವಿಚಾರದೊಂದಿಗೆ ಪಾಲ್ಗೊಳ್ಳಬೇಕು. ನಿಮ್ಮ ಕ್ಲಬ್ ನ ಯಾವುದೇ ಉತ್ತಮ ಕಾರ್ಯಕ್ರಮಗಳಿಗೆ ನನ್ನ ಸಹಕಾರ ಯಾವಾಗಲೂ ಇದೆ. ನಮ್ಮ ಊರಿನ ಕಾರ್ಯಕ್ರಮದಲ್ಲಿ ನಮ್ಮ ಊರಿನ ಯುವಕರಿಗೆ ಮೊದಲ ವೇದಿಕೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.

ಉಡುಪಿ ಅಖಿಲಭಾರತ ತುಳುನಾಡ ದೈವಾರಾಧಕರ ಒಕ್ಕೂಟದ ಸಂಸ್ಥಾಪಕರ ಹಾಗೂ ಉಡುಪಿ ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ ಪರಿವಾರ ದೈವಗಳ ದೈವಸ್ಥಾನದ ಮುಖ್ಯಸ್ಥ ವಿನೋದ್ ಶೆಟ್ಟಿ ಅವರು ಮಾತನಾಡಿ, ಪ್ರಸ್ತುತ ದಿವಸಗಳಲ್ಲಿ ಯುವಕ-ಯುವತಿಯರಲ್ಲಿ ಆಚಾರ ವಿಚಾರ ಕಡಿಮೆಯಾಗಿದ ಬಿಡು ಇರುವ ಸಮಯದಲ್ಲಿ ಮೋಜು – ಮಸ್ತಿ ಬೀಚ್ ಸೋಶಿಯಲ್ ಮೀಡಿಯಾ ಯುಗ, ದೊಡ್ಡ ದೊಡ್ಡ ಸಿನಿಮಾ ಮಹಲ್ ಗಳ ತಿರುಗಾಟ ಸಮಯ ಕಳೆಯುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಇದನ್ನು ಜಾಗೃತಿಗೊಳಿಸಲು ತುಳುನಾಡಿನ ಆಚಾರ-ವಿಚಾರ ಸಂಸ್ಕೃತಿ ಭಜನೆ ಯಕ್ಷಗಾನ ಜಾನಪದ ನೃತ್ಯ ಹಾಡುಗಾರಿಕೆ ಕ್ರೀಡೆ ಇಂಥ ಮೊದಲಾದ ವಿಚಾರಗಳನ್ನು ಇಟ್ಟುಕೊಂಡು ಯುವಕ-ಯುವತಿಯರಿಗೆ ತರಬೇತಿ ನೀಡುವುದರ ಮೂಲಕ ಒಳ್ಳೆ ವಿಷಯ ಇಟ್ಟುಕೊಂಡು ಬೆಳೆಸಿದೆ ಅಂತ ಸಂಘ ಮುಂದಿನ ದಿನದಲ್ಲಿ ಇನ್ನಷ್ಟು ಬಲಗೊಳ್ಳಲಿ. ನಮ್ಮ ತಾಯಿ ಭಾಷೆ ನಮ್ಮ ತುಳು ಭಾಷೆಗೆ ರಾಷ್ಟ್ರೀಯ ಸ್ಥಾನಮಾನ ಸಿಕ್ಕುವಲ್ಲಿ ನಿರಂತರ ಹೋರಾಟದ ಕಾರ್ಯಕ್ರಮಗಳ ಆಯೋಜನೆ ಮಾಡಲಿ ನಿಮ್ಮೊಂದಿಗೆ ನಮ್ಮ ಎಲ್ಲಾ ಸಂಘಟನೆ ಬೆಂಬಲ ವಾಗಿದೆ. ಹಾಗೂ ಸೂರ್ಯ ಚಂದ್ರ ಕಾಲ ಇರುವರೆಗೂ ನಿಮ್ಮ ಸಂಘಟನೆ ಉನ್ನತ ಮಟ್ಟಕ್ಕೆ ಬೆಳೆಯಲಿ ರಾಷ್ಟ್ರೀಯ ರಾಜ್ಯಮಟ್ಟದ ಜಿಲ್ಲಾಮಟ್ಟದ ಪ್ರಶಸ್ತಿಗಳು ಅನುದಾನಗಳು ಒದಗಿ ಬರಲಿ ಎಂದರು.

ಭೂತರಾಜ ದೇವಸ್ಥಾನದ ಮುಖ್ಯಸ್ಥ ಪ್ರವೀಣ್ ಶೆಟ್ಟಿ, ದೊಡ್ಡನಗುಡ್ಡೆ ಪಂಚ ಜುಮಾದಿ ದೈವಸ್ಥಾನ ಗುರಿಕಾರ ನಿತಿನ್ ಕುಮಾರ್, ಕೊರಗಜ್ಜ ದೈವಸ್ಥಾನ ಕುಕ್ಕೆಹಳ್ಳಿ ಧರ್ಮದರ್ಶಿ ಕೃಷ್ಣ ಕುಲಾಲ್, svhsನ ನಿವೃತ್ತ ಅಧ್ಯಾಪಕ ಸಂಜೀವ ಮಡಿವಾಳ, ಬೆಳ್ಳಂಪಳ್ಳಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಉದ್ಯಮಿ ಪುರುಷೋತ್ತಮ ಪ್ರಭು, ಗ್ರಾಮ ಪಂಚಾಯತ್ ಅಧ್ಯಕ್ಷರು ಪುರಂದರ ಕೋಟ್ಯಾನ್, ಉಡುಪಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಕೇಂದ್ರದ ಅಧ್ಯಕ್ಷ ಶಮಿತಾ ಶೆಟ್ಟಿ, ದುರ್ಗಾಪರಮೇಶ್ವರಿ ಚಂಡೆ ಬಳಗ ಮೂಡುಸಗ್ರಿ ಅಧ್ಯಕ್ಷ ರವಿಚಂದ್ರ, ಕುಮಾರ್ ಆರ್ ಶೆಟ್ಟಿ ಬೆಳ್ಳಂಪಳ್ಳಿ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಸದಾನಂದ ಶೆಟ್ಟಿ ಸ್ವಾಗತಿಸಿದರು. ಅಧ್ಯಕ್ಷೆ ರಮಣಿ ವಂದಿಸಿದರು.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

You May Also Like

ಕರಾವಳಿ

0 ಬ್ರಹ್ಮಾವರ : ರುಡ್ ಸೆಟ್‌ ಬ್ರಹ್ಮಾವರ ಮತ್ತು ಸ್ಮಾರ್ಟ್‌ ಕ್ರೀಯೇಶನ್ಸ್‌ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು. ಆವರ್ಸೆ...

error: Content is protected !!