ಮುಂಬರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೊಸ ಭಾರತೀಯ ಜೆರ್ಸಿ ಯನ್ನ ಅನಾವರಣ ಮಾಡಿದೆ. ‘ಬಿಲಿಯನ್ ಚಿಯರ್ಸ್ ಜೆರ್ಸಿ’ಯನ್ನ ಅಭ್ಯಾಸ ಪಂದ್ಯಗಳ ಸಮಯದಲ್ಲಿ ಟೀಮ್ ಇಂಡಿಯಾ ಧರಿಸಲಿದೆ ಮತ್ತು ನಂತರ ಐಸಿಸಿ ಟಿ೨೦ ವಿಶ್ವಕಪ್ʼನಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ಧರಿಸಲಿದೆ ಎಂದು ತಿಳಿಸಿದೆ.