ವರದಿ : ಬಿ.ಎಸ್.ಆಚಾರ್ಯ
ಬಾರಕೂರು : ಕಚ್ಚೂರು ಶ್ರೀಮಾಲ್ತಿ ದೇವಿ ದೇವಸ್ಥಾನ ಮತ್ತು ಬಬ್ಬು ಸ್ವಾಮಿ ಮೂಲಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಶುಕ್ರವಾರ ಸಾಮೂಹಿಕ ಚಂಡಿಕಾಯಾಗ ರಮೇಶ್ ಭಟ್ ನೇತೃತ್ವದಲ್ಲಿ ಜರುಗಿತು. ನೂರಾರು ಭಕ್ತರು ಚಂಡಿಕಾ ಯಾಗದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ನಾನಾ ಭಾಗದಿಂದ ಆಗಮಿಸಿದ ಭಕ್ತಾಧಿಗಳು ಮಕ್ಕಳಿಗೆ ವಿದ್ಯಾರಂಭ ಸನ್ನಿಧಾನದಲ್ಲಿ ಮಾಡಿಸಿದರು. ದೇವಸ್ಥಾನದ ಆವರಣದಲ್ಲಿ ಭಜನೆ, ತುಲಾಭಾರ ಸೇವೆ ಜರುಗಿತು.

ದೇವಸ್ಥಾನದ ಪಧಾಧಿಕಾರಿಗಳಾದ ಗೋಕುಲ್ ದಾಸ್ ಬಾರಕೂರು, ಶಿವಪ್ಪ ನಂತೂರು, ಪ್ರೇಮಾನಂದ ಬಾರಕೂರು, ಉದಯ ಅಂಚನ್ ಎರ್ಮಾಳ್, ಕಮಲಾಕ್ಷ ಬಾರಕೂರು, ವಾಸುದೇವ ಹಂಗಾರಕಟ್ಟೆ, ಸಂಜೀವ ಮಾಸ್ಟರ್, ರಘುರಾಮ ಪೂತ್ತೂರು, ಚೆನ್ನಪ್ಪ ಮೂಲ್ಕಿ, ಬಾಬು ಮಲ್ಲಾರ್, ರವಿರಾಜ ಹೆಜಮಾಡಿ, ಪ್ರವೀಣ್ ಏರ್ಮಾಳ್, ದಯಾನಂದ ಅಲೇವೂರು, ಕೆ.ಆರ್ ಕೃಷ್ಣ , ಶಿವರಾಜ್ ಮಲ್ಲಾರ್ ಸೇರಿದಂತೆ ಅರ್ಚಕರು, ಮಹಿಳಾ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Advertisement. Scroll to continue reading.

In this article:barkuru, Diksoochi news, diksoochi Tv, diksoochi udupi, malthi amma temple

Click to comment