ಬ್ರಹ್ಮಾವರ : ದೇವಾಲಯಗಳ ನಗರ ಬಾರಕೂರಿನಲ್ಲಿ ಶರನ್ನವರಾತ್ರಿ ಅಂಗವಾಗಿ ನಾನಾ ದೇವಿ ದೇವಸ್ಥಾನದಲ್ಲಿ ಪ್ರತೀ ದಿನ ಚಂಡಿಕಾ ಯಾಗ ನಡೆಯುತ್ತಿದ್ದು, ನಾನಾ ಭಾಗದಿಂದ ಸಹಸ್ರಾರು ಭಕ್ತರು ಭಾಗಿಯಾಗಿದ್ದರು.
ಶ್ರೀ ಏಕನಾಥೇಶ್ವರೀ, ಬನ್ನಿ ಮಹಾಕಾಳಿ, ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ, ಶ್ರೀ ಕಾಳಿಕಾಂಬಾ ದೇವಸ್ಥಾನ, ಕಚ್ಚೂರು ಶ್ರೀ ಮಾಲ್ತೀ ದೇವಿ ದೇವಸ್ಥಾನ ಸೇರಿದಂತೆ ನಾನಾ ದೇವಸ್ಥಾನದಲ್ಲಿ ಸಾಮೂಹಿಕ ಚಂಡಿಕಾಯಾಗದಲ್ಲಿ ಭಕ್ತರು ಭಾಗಿಯಾದರು. ಬಹುತೇಕ ದೇವಸ್ಥಾನದಲ್ಲಿ ಪ್ರತೀ ದಿನ ಅನ್ನ ಸಂತರ್ಪಣೆ ನಡೆಯಿತು.