Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ದಿ.ಆಸ್ಕರ್ ಫೆರ್ನಾಂಡೀಸ್ ಅವರ ಸ್ಮರಣಾರ್ಥ ನೀಲಾವರ ಗೋಶಾಲೆಗೆ ಮೇವು ವಿತರಣೆ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಗೋವಿಗಾಗಿ ಮೇವು ಅಭಿಯಾನದ ಭಾಗವಾಗಿ ಇಂದು ಸತೀಶ್ ಕಿಣಿ ಬೆಳ್ವೆ ಅಭಿಮಾನಿ ಬಳಗ ನೇತೃತ್ವದಲ್ಲಿ ಮಾಜಿ ಕೇಂದ್ರ ಸಚಿವ ದಿ.ಆಸ್ಕರ್ ಫೆರ್ನಾಂಡೀಸ್ ಅವರ ಸ್ಮರಣೆಗಾಗಿ 2 ಲೋಡ್ ಒಣಹುಲ್ಲುನ್ನು ನೀಲಾವರ ಗೋಶಾಲೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗೋವಿಗಾಗಿ ಮೇವು ಸ್ಥಾಪಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ಹಿರಿಯ ಚೇತನ ದಿ.ಆಸ್ಕರ್ ಫೆರ್ನಾಂಡೀಸರು ಗೋಪ್ರೇಮಿಯಾಗಿದ್ದು ರಾಜ್ಯಸಭೆಯಲ್ಲಿ ಗೋಮೂತ್ರದ ಪ್ರಾಮುಖ್ಯತೆ ಕುರಿತು ಈ ಹಿಂದೆ ಉಲ್ಲೇಖ ಮಾಡಿದ್ದರು. ಆ ಮಹಾನ್ ನಾಯಕರ ಸ್ಮರಣೆಗಾಗಿ ಗೋವಿಗೆ ಮೇವು ನೀಡಿರುವುದು ಮಾದರಿ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ರೋಹಿತ್ ಶೆಟ್ಟಿ, ಸುರೇಶ್ ಶೆಟ್ಟಿ ಬೆಪ್ಡೆ, ದಯಾನಂದ ಪೂಜಾರಿ ಮಡಾಮಕ್ಕಿ, ವಿಶ್ವಾಸ್ ಶೆಟ್ಟಿ ಹಂಜ, ರತ್ನಾಕರ ಶೆಟ್ಟಿ ಮಡಾಮಕ್ಕಿ, ದಿನಕರ ಶೆಟ್ಟಿ ಅಲ್ಬಾಡಿ, ಪ್ರತಾಪ್ ಶೆಟ್ಟಿ ಮಡಾಮಕ್ಕಿ ಉಪಸ್ಥಿತರಿದ್ದರು

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!