ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಹೊಸ ಬೆಳಕು ಆಶ್ರಮಕ್ಕೆ ಪೇಜಾವರ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿ, ಸರಕಾರ ಮಾಡುವ ಕೆಲಸ ಹೊಸಬೆಳಕು ಸಂಸ್ಥೆ ಮಾಡುತ್ತಿರುವುದು ಉಡುಪಿಗೆ ಶ್ಲಾಘನೀಯ ಎಂದರು. ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಶ್ರೀ ಮಠ ಬಾಳೆಕುದ್ರು ಆಶ್ರಮದ ಪ್ರಾರಂಭದಿಂದಲೂ ಸಹಕಾರ ನೀಡಿದ್ದು, ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಹೊಸಬೆಳಕು ಸಂಸ್ಥೆಗೆ ಧನ ಸಹಾಯ ಮಾಡಿದರು. ಬೆಳ್ತಂಗಡಿ, ದಂಡಿಬಾಗಿಲಿನ ಸಿಯೋನ್ ಆಶ್ರಮದ ಯು.ಸಿ.ಪೌಲುನ್ ಮಾತನಾಡಿ, ನಾನು ಇಂದು ಭಾನುವಾರ ಚರ್ಚ್ ಹೋಗಿ ಪಾರ್ಥನೆ ಮಾಡಿದರೆ ಇಷ್ಟ ಆಗುತ್ತಿರಲಿಲ್ಲ, ಇಂದು ಅದಕ್ಕಿಂತ ತುಂಬಾ ಖುಷಿ ಆಗಿದೆ ಎಂದರು.
ಬೈಲೂರು, ಮಸೀದಿ ಕಂಪನದ ಅಬ್ದುಲ್ ರಜಾಕ್ ಮೊಹಿದ್ದೀನ್ ಆಶ್ರಮದ ನೂತನ ಕಟ್ಟಡಕ್ಕೆ 10 ಚೀಲ ಸಿಮೆಂಟ್ ನೀಡುವುದಾಗಿ ಹೇಳಿ ಎಲ್ಲಾ ಧರ್ಮದಲ್ಲೂ ಮೊದಲು ಸೇವೆ ಮಾಡಬೇಕು. ಆಗ ಜೀವನ ಸಾರ್ಥಕ ಎಂದರು. ಈ ಸಂದರ್ಭ ಬೈಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ ಪೂಜಾರಿ, ಸಮಿತ್ ಶೆಟ್ಟಿ ಉಪಸ್ಥಿತರಿದ್ದರು.
ವಿನಯಚಂದ್ರ ಸಾಸ್ತಾನ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮವನ್ನು ನಾಗರತ್ನ ಹೇರ್ಳೆ ನಿರೂಪಿಸಿದರು.

ಊರಿನವರ ಸಹಕಾರದಿಂದ ಚಂಡೆವಾದನ ಹಾಗೂ ಧರ್ಮಸ್ಥಳ ಸ್ವಸಹಾಯ ಸಂಘದವರಿಂದ ಸ್ವಾಮೀಜಿಯವರಿಗೆ ಕಳಸವನ್ನು ಹಿಡಿದು ಸ್ವಾಗತಿಸುವಲ್ಲಿ ಭಾಗಿಗಳಾಗಿದ್ದರು.
