ದಿನೇಶ್ ರಾಯಪ್ಪನಮಠ
ಕೊಲ್ಲೂರು : ಶ್ರೀಮೂಕಾಂಬಿಕಾ ಸನ್ನಿಧಾನಕ್ಕೆ ಹಿರಿಯ ನಟಿ ಲಕ್ಷ್ಮೀ ದಂಪತಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಕ್ಕಳಿಗೆ ತವರು ಮನೆಗೆ ಬಂದಾಗ ಎಷ್ಟು ಖುಷಿ ಅನುಭವಿಸುತ್ತಾರೋ, ಹಾಗೆ ನನಗೆ ನನ್ನ ತವರಿಗೆ ಬಂದಷ್ಟೇ ಸಂತೋಷವಾಗುತ್ತಿದೆ. ಈ ದೇವಳದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಬರುತ್ತಿರೋದು ಸಂತಸದ ವಿಷಯ” ಎಂದರು.
“ಕೊರೋನಾ ಹೋಗಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ. ಮಕ್ಕಳಿಗೆ ಶಾಲೆ ಶುರುವಾಗುತ್ತಿದ್ದು, ಕೊರೋನಾ ಬಗ್ಗೆ ಅರಿವು ಮೂಡಿಸಿ. ಅವರಿಗೆ ಒಮ್ಮೆ ಹೇಳಿದರೆ, ಅವರು ಅದನ್ನು ಹಿರಿಯರಿಗಿಂತಲೂ ಚೆನ್ನಾಗಿ ಪಾಲಿಸುತ್ತಾರೆ” ಎಂದರು
Advertisement. Scroll to continue reading.