ಬೆಂಗಳೂರು : ಮೊದಲು ನಾನು ಹೋಗಬೇಕಾಗಿತ್ತು. ಮಿಸ್ ಆಗಿ ತಮ್ಮ ಹೋದ. ಅವನು ಅಪ್ಪ ಅಮ್ಮನನ್ನು ನೋಡಲು ಮೊದಲು ಹೋದ. ನನ್ನ ಎರಡು ಸಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕರೆತಂದ. ನನ್ನನ್ನು ಉಳಿಸಿದ. ನನ್ನಿಂದ ಅವನನ್ನು ಉಳಿಸಿಕೊಳ್ಳಲಾಗಲಿಲ್ಲ. ಶಾಂತಿಯುತವಾಗಿ ಅವನನ್ನು ಕಳುಹಿಸಿಕೊಡಬೇಕಾಗಿದೆ ಎಂದು ರಾಘವೇಂದ್ರ ರಾಜ್ ಕುಮಾರ್ ಭಾವುಕರಾದರು.